alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿದ ಜಿಲ್ಲಾಧಿಕಾರಿ

ಐಎಎಸ್ ಅಧಿಕಾರಿಗಳೆಂದರೆ ಜನಸಾಮಾನ್ಯರಿಂದ ಬಲು ದೂರ ಎಂಬ ಮಾತಿದೆ. ಇದಕ್ಕೆ ಹೊರತಾದ ಪ್ರಕರಣಗಳೂ ನಡೆದಿವೆ. ಇದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ.

ಕೇರಳದ ಜಿಲ್ಲೆಯೊಂದರ ಜಿಲ್ಲಾಧಿಕಾರಿ ಸುಹಾಸ್ ಬುಧವಾರದಂದು ನೀರ್ಕುನ್ನಂ ನಲ್ಲಿರುವ ಶ್ರೀದೇವಿ ವಿಲಾಸಂ ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿದ್ದಾರೆ.

ಇವರು ಮಧ್ಯಾಹ್ನ ಶಾಲೆಗೆ ಭೇಟಿ ನೀಡಿದ್ದ ಕಾರಣ ವಿದ್ಯಾರ್ಥಿಗಳು ಬಿಸಿಯೂಟ ಮಾಡಲು ಸಜ್ಜಾಗುತ್ತಿದ್ದರು. ಹೀಗಾಗಿ ಆಹಾರದ ಗುಣಮಟ್ಟ ಪರಿಶೀಲಿಸಲು ಮುಂದಾದ ಜಿಲ್ಲಾಧಿಕಾರಿ ಸುಹಾಸ್ ಮಕ್ಕಳೊಂದಿಗೆ ತಾವೂ ಊಟಕ್ಕೆ ಕುಳಿತಿದ್ದಾರೆ.

ಕೇರಳದ ಸರ್ಕಾರಿ ಶಾಲೆಗಳ ಪೈಕಿ ಅತ್ಯುತ್ತಮ ಎಂಬ ಹೆಸರು ಗಳಿಸಿರುವ ಶ್ರೀದೇವಿ ವಿಲಾಸಂ ಶಾಲೆಯಲ್ಲಿ 1600 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಜಿಲ್ಲಾಧಿಕಾರಿಗಳು ಬಿಸಿಯೂಟ ಸೇವಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...