alex Certify
ಕನ್ನಡ ದುನಿಯಾ       Mobile App
       

Kannada Duniya

ಮಣ್ಣಿನಲ್ಲಿ ಹೂಳಿಕೊಂಡು ರೈತರ ವಿಭಿನ್ನ ಪ್ರತಿಭಟನೆ

ವರುಣನ ಕಣ್ಣಾಮುಚ್ಚಾಲೆಯಿಂದ ಪ್ರತಿವರ್ಷ ಭಾರತದ ರೈತರು ಸಂಕಷ್ಟ ಅನುಭವಿಸ್ತಾರೆ. ಬೆಳೆ ಬೆಳೆಯಲು ಸಾಲ ಮಾಡಿ, ಫಸಲು ಬರದೇ ಕಂಗಾಲಾಗೋದು ಸಾಮಾನ್ಯವಾಗಿಬಿಟ್ಟಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಭೂಸ್ವಾಧೀನವೆಂಬ ಭೂತ ಅನ್ನದಾತರನ್ನು ಬಿಡದೇ ಕಾಡುತ್ತಿದೆ.

ರಾಜಸ್ತಾನದ ಸಿಕರ್ ಎಂಬಲ್ಲಿ ರೈತರು ಭೂಸ್ವಾಧೀನವನ್ನು ವಿರೋಧಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮನ್ನು ತಾವೇ ಮಣ್ಣಿನಲ್ಲಿ ಹೂಳಿಕೊಂಡು ಭೂಸ್ವಾಧೀನದ ವಿರುದ್ಧ ಧ್ವನಿಯೆತ್ತಿದ್ದಾರೆ. ಟೋಲ್ ರಸ್ತೆಗಾಗಿ ರೈತರ ಭೂಮಿಯ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ.

ಸೂಕ್ತ ಪರಿಹಾರವನ್ನೂ ಕೊಡದೇ ಸರ್ಕಾರ ಜಮೀನು ಕಬಳಿಸ್ತಿದೆ ಅನ್ನೋದು ರೈತರ ಆರೋಪ. ಭೂಮಿಯನ್ನು ಬಿಟ್ಟುಕೊಡಿ ಇಲ್ಲವೇ ಪರಿಹಾರ ಕೊಡಿ ಅಂತಾ ಪಟ್ಟು ಹಿಡಿದಿರೋ ಮಣ್ಣಿನ ಮಕ್ಕಳು, ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

ಸದ್ಯ ಮಣ್ಣಿನ ಹೊಂಡದಲ್ಲಿ ನಿಂತು ನ್ಯಾಯಕ್ಕಾಗಿ ರೈತರು ಆಗ್ರಹಿಸುತ್ತಿದ್ದಾರೆ. ಸರ್ಕಾರ ಬೇಡಿಕೆ ಈಡೇರಿಸದೇ ಇದ್ದಲ್ಲಿ ದಿನದಿಂದ ದಿನಕ್ಕೆ ಹೊಂಡದ ಆಳವನ್ನು ಇನ್ನಷ್ಟು ಹೆಚ್ಚಿಸುವುದಾಗಿ ರೈತರು ತಿಳಿಸಿದ್ದಾರೆ. ಸೋಮವಾರ ಬೃಹತ್ ರ್ಯಾಲಿ ಕೂಡ ನಡೆಸಲು ಮುಂದಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...