alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಮು ಸಾಮರಸ್ಯಕ್ಕೆ ಮಾದರಿ ಇಲ್ಲಿನ ಗ್ರಾಮಸ್ಥರು

ದೇಶದಲ್ಲಿ ಕೋಮು ಗಲಭೆ ಆಗಾಗ ಭುಗಿಲೇಳುತ್ತಲೇ ಇರುತ್ತದೆ. ಆದ್ರೆ ಕೆಲವು ಪ್ರದೇಶಗಳು ಸೌಹಾರ್ದ ಬದುಕಿಗೆ ಈಗಲೂ ಮಾದರಿಯಾಗಿ ನಿಲ್ಲುತ್ತವೆ. ಜಾರ್ಖಂಡ್ ನ ಧನಬಾದ್ ಜಿಲ್ಲೆ ಕೂಡ ಇವುಗಳಲ್ಲೊಂದು. ಇಲ್ಲಿರುವ 40 ಮುಸ್ಲಿಂ ಕುಟುಂಬಗಳು ಹೂವಿನ ಕೃಷಿ ಮಾಡುತ್ತವೆ.

ಹೂವುಗಳನ್ನು ಬೆಳೆಸಿ, ಅವುಗಳಿಂದ ಹಾರ ತಯಾರಿಸಿ ಹಿಂದು ದೇವಾಲಯಗಳಿಗೆ ವಿತರಿಸುತ್ತಾರೆ. ಈ ಮೂಲಕ ಕೋಮು ಸಾಮರಸ್ಯ ಮತ್ತು ಶಾಂತಿಯ ಸಂದೇಶ ಸಾರುತ್ತಿವೆ. ಕಳೆದ 40 ವರ್ಷಗಳಿಂದ್ಲೂ ಈ ಮುಸ್ಲಿಂ ಕುಟುಂಬಗಳು ಇದೇ ಕಾಯಕ ಮಾಡುತ್ತಿವೆ.

ರಾಮನವಮಿ, ದುರ್ಗಾ ಪೂಜೆ ಸಂದರ್ಭದಲ್ಲೆಲ್ಲ ಹಿಂದೂ ದೇವಾಲಯಗಳಿಗೆ ಉಚಿತವಾಗಿ ಹೂವಿನ ಅಲಂಕಾರವನ್ನು ಮುಸಲ್ಮಾನರೇ ಮಾಡಿಕೊಡುತ್ತಾರೆ. ಇಲ್ಲಿ ಹಿಂದು-ಮುಸಲ್ಮಾನರೆಂಬ ಬೇಧ-ಭಾವ, ಕೋಮು ಸಂಘರ್ಷ ಇದುವರೆಗೆ ಒಮ್ಮೆಯೂ ಮೂಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...