alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟಿದ ಊರು ಹಸಿರಾಗಿಡಲು ಪಣ ತೊಟ್ಟ ಪೊಲೀಸ್ ಪೇದೆ

ಹಲವು ದಶಕಗಳಿಂದ ಪ್ರಕೃತಿಯನ್ನ ಮನುಷ್ಯ ಕಾಂಕ್ರೀಟ್ ಕಾಡಿಗಾಗಿ ಸಾಕಷ್ಟು ದುರ್ಬಳಕೆ ಮಾಡಿಕೊಳ್ತಿದ್ದಾನೆ. ಅದಕ್ಕಾಗಿ ಪ್ರಕೃತಿಯಿಂದ ನಮಗೆ ಸಿಕ್ತಿರೋದು ಕೂಡ ಅಂತದ್ದೇ ಪ್ರತಿಕ್ರಿಯೆ.

ಕ್ರಮೇಣ ಹಸಿರು ಮಾಯವಾಗುತ್ತಿರುವ ಪರಿಣಾಮ ಉಸಿರಾಡಲು ಶುದ್ಧ ಗಾಳಿ ಕೂಡ ನಮಗೆ ಸಿಗುತ್ತಿಲ್ಲ. ಪ್ರಕೃತಿ ನಮಗೇನು ಕೊಟ್ಟಿದೆ ಅನ್ನೋದಕ್ಕಿಂತ ಈಗ ನಾವು ಪ್ರಕೃತಿಗೆ ಏನು ಕೊಡ್ತೀವಿ ಅನ್ನೋ ಆತ್ಮವಿಮರ್ಶೆಯನ್ನ ಎಲ್ಲರೂ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೆಲವರು ಈಗಾಗ್ಲೇ ಪ್ರಕೃತಿಯನ್ನ ಮೊದಲಿನ ಹಾಗೆ ಹಸಿರಾಗಿಡುವ ಕೆಲಸವನ್ನು ಶುರುಮಾಡಿದ್ದಾರೆ. ಅಂತವರ ಪೈಕಿ ಒಬ್ಬರು ಚಂಡೀಘಡದ ಪೊಲೀಸ್ ಕಾನ್ಸ್​ ಟೇಬಲ್ ದೇವೇಂದ್ರ ಸುರಾ.

ಹರಿಯಾಣದ ಸೋನೆಪೇಟ್ ಮೂಲದವರಾದ ದೇವೇಂದ್ರ ಸುರಾ ತಮ್ಮ ಹುಟ್ಟೂರನ್ನು ಮೊದಲಿನ ಹಾಗೆ ಹಸಿರಾಗಿಡಬೇಕು ಅನ್ನೋ ಪಣ ತೊಟ್ಟಿದ್ದಾರೆ. ಅದಕ್ಕಾಗಿಯೇ ಅವರು ಕಳೆದ ಆರು ವರ್ಷಗಳಿಂದ ಕೆಲಸ ಮಾಡ್ತಿದ್ದಾರೆ. ಇದಕ್ಕಾಗಿ ದಿ ಸಿಟಿ ಬ್ಯೂಟಿಫುಲ್ ಅನ್ನೋ ಕಾರ್ಯಕ್ರಮವನ್ನು ಅವರು ಶುರುಮಾಡಿದ್ದಾರೆ. ಫ್ರೆಂಚ್ ಆರ್ಕಿಟೆಕ್ಟ್ ಲೇ ಕೊರ್​ಬುಸಿಸ್ ಅವರಿಂದ ಸ್ಫೂರ್ತಿ ಪಡೆದು ಶಿವಾಲಿಕ್ ಗುಡ್ಡಗಾಡು ಪ್ರದೇಶ ಮತ್ತೆ ಹಚ್ಚಹಸಿರಿನಿಂದ ನಳನಳಿಸುವಂತೆ ಮಾಡುವ ಪಣ ತೊಟ್ಟಿದ್ದಾರೆ.

ಇದಕ್ಕಾಗಿ ಸುರಾ ಆರು ವರ್ಷಗಳಿಂದ ತಮ್ಮ ಸ್ವಂತ ಹಣ 28-30 ಲಕ್ಷ ರೂಪಾಯಿಗಳನ್ನ ಖರ್ಚು ಮಾಡಿದ್ದಾರೆ. ಅಷ್ಟೇ ಅಲ್ಲ ಸುಮಾರು 152 ಗ್ರಾಮಗಳಿಗೆ ತೆರಳಿ ಯುವಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಕಚೇರಿಗಳಿಗೂ ತೆರಳಿ ಪರಿಸರ ಉಳಿವಿಗೆ ಮನವಿ ಮಾಡ್ತಿದ್ದಾರೆ. ಸುಮಾರು 2000 ಮಂದಿ ಯುವಕರು ಈಗ ದೇವೇಂದ್ರ ಸುರಾ ಅವರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...