alex Certify
ಕನ್ನಡ ದುನಿಯಾ       Mobile App
       

Kannada Duniya

ತೆಲಂಗಾಣದಲ್ಲಿ ಬಾಡಿಗೆಗಿದೆ ಜೈಲು

jial

ಭಾರತದ ಬಹುತೇಕ ಜೈಲುಗಳೆಲ್ಲ ಭರ್ತಿಯಾಗಿವೆ. ಖೈದಿಗಳಿಗೆ ಜಾಗವೇ ಇಲ್ಲದಂತಾಗಿದೆ. ಆದ್ರೆ ಇನ್ಮುಂದೆ ಆಯಾ ರಾಜ್ಯಗಳು ತಮ್ಮ ಖೈದಿಗಳನ್ನು ಬಾಡಿಗೆ ಜೈಲಿನಲ್ಲಿಡಬಹುದು. ಅದು ಕೂಡ ಭಾರತದ ಅತ್ಯಂತ ಕಿರಿಯ ರಾಜ್ಯ ತೆಲಂಗಾಣದಲ್ಲಿ.

ತೆಲಂಗಾಣದ ಜೈಲಿನಲ್ಲಿ ಒಬ್ಬ ಖೈದಿಗೆ ತಿಂಗಳಿಗೆ 10,000 ರೂಪಾಯಿ ಬಾಡಿಗೆ ಪಡೆಯಲು ನಿರ್ಧರಿಸಲಾಗಿದೆ. ಆದ್ರೆ ಈ ಆಫರ್ ಎಲ್ಲರಿಗೂ ಅನ್ವಯವಾಗುವುದಿಲ್ಲ. ಅತ್ಯಂತ ಗಂಭೀರ ಅಪರಾಧ ಎಸಗಿದ ಅಪರಾಧಿಗಳಿಗೆ ಇಲ್ಲಿ ಜಾಗವಿಲ್ಲ. ಜೊತೆಗೆ ದೊಡ್ಡ ದೊಡ್ಡ ಕ್ರಿಮಿನಲ್ ಗಳಿಗೆ ಹಾಗೂ ವಿಚಾರಣೆ ಹಂತದಲ್ಲಿರುವ ಆರೋಪಿಗಳಿಗೆ ಕೂಡ ಜೈಲು ಕೋಣೆಯನ್ನು ಬಾಡಿಗೆಗೆ ಕೊಡಲಾಗುವುದಿಲ್ಲ.

ಜೈಲುಗಳನ್ನು ಬಾಡಿಗೆ ಕೊಡುವ ಯೋಜನೆ ನಾರ್ವೆಯಲ್ಲಿ ಜಾರಿಯಲ್ಲಿದೆ. ಅದೇ ರೀತಿ ತೆಲಂಗಾಣದಲ್ಲೂ ಮಾಡಲು ಚಿಂತನೆ ನಡೆದಿದೆ. ತೆಲಂಗಾಣದಲ್ಲಿ ಒಟ್ಟು 50 ಕಾರಾಗೃಹಗಳಿವೆ. 6,848 ಖೈದಿಗಳನ್ನು ಇಟ್ಟುಕೊಳ್ಳಲು ಸ್ಥಳಾವಕಾಶವಿದೆ. ಆದ್ರೀಗ 6063 ಖೈದಿಗಳು ಮಾತ್ರ ಇದ್ದಾರೆ. ಇನ್ನು 800 ಖೈದಿಗಳನ್ನು ಇರಿಸಿಕೊಳ್ಳುವಷ್ಟು ಜಾಗವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...