alex Certify
ಕನ್ನಡ ದುನಿಯಾ       Mobile App
       

Kannada Duniya

ವಿಷ್ಣು ದೇವಾಲಯದಲ್ಲಿ ಮುಸ್ಲಿಂ ಬಾಂಧವರಿಗಾಗಿ ಇಫ್ತಾರ್ ಕೂಟ

ಭಾರತ ಜ್ಯಾತ್ಯಾತೀತ ರಾಷ್ಟ್ರವಾಗಿದೆ. ಇಲ್ಲಿ ಎಲ್ಲ ಧರ್ಮದವರು ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದಾರೆ. ಕೇರಳದ ಮಲಪ್ಪುರಂನ ಕೊಟ್ಟಕಾಲ್ ಧಾರ್ಮಿಕ ಸಹಬಾಳ್ವೆಗೆ ಉತ್ತಮ ಉದಾಹರಣೆಯಾಗಿದೆ. ಪವಿತ್ರ ರಂಜಾನ್ ಹಬ್ಬದ ತಿಂಗಳಿನಲ್ಲಿ ಕೊಟ್ಟಕಾಲ್ ವಿಷ್ಣು ದೇವಾಲಯದಲ್ಲಿ ಮುಸ್ಲಿಂ ಸಮುದಾಯದವರಿಗಾಗಿ ಇಫ್ತಾರ್ ಭೋಜನದ ವ್ಯವಸ್ಥೆ ಮಾಡಲಾಗಿದೆ.

ವೆಜಿಟೇಬಲ್ ಬಿರಿಯಾನಿ, ಸ್ನ್ಯಾಕ್ಸ್, ಹಣ್ಣು, ಜ್ಯೂಸ್ ಸೇರಿದಂತೆ ಪಾನೀಯಗಳನ್ನು ದೇವಾಲಯದಲ್ಲಿ ನೀಡಲಾಗುವುದು. ಸುಮಾರು 700 ಜನರಿಗೆ ಇಫ್ತಾರ್ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಲಕ್ಷ್ಮಿ ನಾರಾಯಣ ಮೂರ್ತಿ ವಿಷ್ಣು ದೇವಸ್ಥಾನದ ಪ್ರತಿಷ್ಠಾನ ದಿವಸವಾಗಿದ್ದು, ಇಫ್ತಾರ್ ವ್ಯವಸ್ಥೆ ಮಾಡಲಾಗಿತ್ತು.

ದೇವಸ್ಥಾನದ ಆಡಳಿತ ಮಂಡಳಿ ಇಫ್ತಾರ್ ಗಾಗಿಯೇ ಪ್ರತ್ಯೇಕ ಸಂಘಟನಾ ಸಮಿತಿಯನ್ನು ಸ್ಥಾಪಿಸಿ ಎಲ್ಲ ವ್ಯವಸ್ಥೆ ನೋಡಿಕೊಂಡಿತ್ತು. ಶಾಂತಿ-ಸಾಮರಸ್ಯದ ಸಂದೇಶ ಸಾರಲು ಪ್ರತಿ ವರ್ಷ ದೇವಸ್ಥಾನದಲ್ಲಿ ಇಫ್ತಾರ್ ಆಯೋಜನೆ ಮಾಡಲಾಗುತ್ತದೆ. ಮರುದಿನ ದೇವಸ್ಥಾನದ ಕಾರ್ಯಕ್ರಮ ನಡೆಯುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ.

ದೇವಸ್ಥಾನದ ಸುತ್ತಮುತ್ತಲ ಗ್ರಾಮದ ಎಲ್ಲ ಮುಸ್ಲಿಂ ಬಾಂಧವರನ್ನು ಇಫ್ತಾರ್ ಗೆ ಆಹ್ವಾನ ಮಾಡಲಾಗಿತ್ತು. ಗ್ರಾಮದ ಎಲ್ಲರ ಬೆಂಬಲದೊಂದಿಗೆ ದೇವಸ್ಥಾನದಲ್ಲಿ ಆಯೋಜನೆ ಮಾಡಿದ್ದ ಇಫ್ತಾರ್ ಯಶಸ್ವಿಯಾಯ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...