alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಳಿ ಹಣ’ವಿದ್ದರೂ ನಿಮ್ಮ ಬೆರಳಿಗೆ ‘ಮಸಿ’..!

ink

ಜನರು ಚಾಪೆ ಕೆಳಗೆ ನುಸುಳಿದ್ರೆ ಕೇಂದ್ರ ಸರ್ಕಾರ ರಂಗೋಲಿ ಕೆಳಗೆ ನುಸುಳ್ತಾ ಇದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಹಣ ಬದಲಾವಣೆ ಬಳಿಕ ಕೈಗೆ ಇಂಕ್ ಹಾಕುವ ಹೊಸ ಮಾಸ್ಟರ್ ಪ್ಲಾನ್.

ಒಂದು ಬಾರಿ ಒಬ್ಬರಿಗೆ 4000 ರೂಪಾಯಿ ಹಳೆ ನೋಟುಗಳ ಬದಲಾವಣೆಗೆ ಮಾತ್ರ ಅವಕಾಶವಿದೆ. ಆದ್ರೂ ಕೆಲವರು 2-3 ಬಾರಿ ನೋಟು ಬದಲಾಯಿಸಿಕೊಳ್ತಿದ್ದಾರೆ. ಒಮ್ಮೆ ಆಧಾರ್ ಕಾರ್ಡ್, ಒಮ್ಮೆ ಪ್ಯಾನ್ ಕಾರ್ಡ್ ಮತ್ತೊಮ್ಮೆ ವೋಟರ್ ಐಡಿ ಹೀಗೆ ಬೇರೆ ಬೇರೆ ದಾಖಲೆ ಕೊಟ್ಟು ಬ್ಯಾಂಕ್ ಸಿಬ್ಬಂದಿಯನ್ನು ಯಾಮಾರಿಸ್ತಾ ಇದ್ರು. ಆದ್ರೆ ಇನ್ಮೇಲೆ ಈ ಟ್ರಿಕ್ಸ್ ನಡೆಯೋದೇ ಇಲ್ಲ.

ಹಣ ಬದಲಾಯಿಸಿದ ನಂತರ ನಿಮ್ಮ ಕೈ ಉಗುರಿನ ಮೇಲೆ ಶಾಯಿಯ ಗುರುತು ಹಾಕಲಾಗುತ್ತದೆ, ಇದು ಮತದಾನದ ಬಳಿಕ ಹಾಕುವ ಇಂಕ್ ನಂತೆ ಸುಲಭವಾಗಿ ಅಳಿಸಲು ಸಾಧ್ಯವಿಲ್ಲದಂಥದ್ದು. ಕೈಮೇಲೆ ಶಾಯಿಯ ಗುರುತು ಇರೋದ್ರಿಂದ ಒಂದಕ್ಕಿಂತ ಹೆಚ್ಚು ಬಾರಿ ಹಣ ಬದಲಾಯಿಸಲು ಪ್ಲಾನ್ ಮಾಡಿದ್ರೆ ಸಿಕ್ಕಿಹಾಕಿಕೊಳ್ಳೋದು ಗ್ಯಾರಂಟಿ.

ಈ ಪ್ರಕ್ರಿಯೆಗೆ ಕಡಿವಾಣ ಹಾಕಲು ಖುದ್ದು ಪ್ರಧಾನಿ ಮೋದಿ ಇಂಕ್ ಹಾಕುವಂತೆ ಸೂಚನೆ ನೀಡಿದ್ದಾರಂತೆ. ವ್ಯಕ್ತಿಯೊಬ್ರು ಒಂದಕ್ಕಿಂತ ಹೆಚ್ಚು ಬಾರಿ ಹಣ ಬದಲಾವಣೆ ಮಾಡಿದ್ರೆ ಇತರರಿಗೆ ತೊಂದರೆಯಾಗಲಿದೆ, ಯಾಕಂದ್ರೆ ಪ್ರತಿ ಬ್ಯಾಂಕ್ ಎದುರು ನೂರಾರು ಮಂದಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಹಣ ಸಿಕ್ರೆ ಸಾಕಪ್ಪಾ ಅಂತಾ ಕಾಯ್ತಿರ್ತಾರೆ. ಎಲ್ಲರಿಗೂ ಹೊಸ ನೋಟು ಸಿಗುವಂತಾಗಬೇಕು ಅನ್ನೋ ಕಾರಣಕ್ಕೆ ಸರ್ಕಾರ ಶಾಯಿ ಗುರುತು ಹಾಕಲು ಮುಂದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...