alex Certify
ಕನ್ನಡ ದುನಿಯಾ       Mobile App
       

Kannada Duniya

ಮಠ, ಮಂದಿರಗಳ ಮಾಹಿತಿ ಕಲೆ ಹಾಕಲು ಮುಂದಾದ ಬಿಜೆಪಿ…! ಕಾರಣವೇನು ಗೊತ್ತಾ…?

ಮುಂಬರುವ ಲೋಕಸಭಾ ಚುನಾವಣೆಗೆ ಬೇರು ಮಟ್ಟದ ತಯಾರಿ ಆರಂಭಿಸಿರುವ ಬಿಜೆಪಿಯು ಮತ ಸಮೀಕರಣಕ್ಕೆ ಹೊಸ ಸೂತ್ರವೊಂದನ್ನು ಹೆಣೆದಿದೆ.

ಲೋಕಸಭೆಯಲ್ಲಿ ಅತಿ ಹೆಚ್ಚುಸ್ಥಾನ ಹೊಂದಿರುವ ಉತ್ತರ ಪ್ರದೇಶದಲ್ಲಿ 2013ರಲ್ಲಿ ಉತ್ತಮ ಲಾಭ ಮಾಡಿಕೊಂಡಿದ್ದು, ಈ ಬಾರಿಯೂ ಕ್ಲೀನ್ ಸ್ವೀಪ್ ಮಾಡುವ ಉದ್ದೇಶದಿಂದ ಬಿಜೆಪಿ ಹಿಂದೂ ಮತ ಸಮೀಕರಣದ ಲೆಕ್ಕಾಚಾರ ಹಾಕಿದೆ.

ಈ ಕಾರಣಕ್ಕಾಗಿ ಉತ್ತರ ಪ್ರದೇಶದ, ಮಂದಿರ ಮತ್ತು ಆಶ್ರಮಗಳ ಮಾಹಿತಿ ಸಂಗ್ರಹಣೆಗಿಳಿದಿರುವ ಬಿಜೆಪಿ ಅಲ್ಲಿನ ರಾಜ್ಯ ಘಟಕ, ಎಸ್ಸಿ, ಎಸ್ಟಿ, ಒಬಿಸಿ ಜನಸಂಖ್ಯೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.
ಸಂಗ್ರಹವಾಗುವ ಮಾಹಿತಿಯನ್ನು ಆಧರಿಸಿ ಚುನಾವಣೆ ರಣತಂತ್ರ ರೂಪಿಸುವುದು ಕಮಲ ನಾಯಕರ ತಂತ್ರಗಾರಿಕೆ.

ಉತ್ತರ ಪ್ರದೇಶದ 1.6 ಲಕ್ಷ ಬೂತ್ ಗೆ ಫಾರ್ಮ್ ರವಾನೆಯಾಗಿದ್ದು, ಅದರಲ್ಲಿ ಧಾರ್ಮಿಕ ಸ್ಥಳದ ಹೆಸರು, ಸ್ಥಳ, ಅಲ್ಲಿನ ಪ್ರಮುಖರು ಅಥವಾ ಅರ್ಚಕರ ಹೆಸರು, ಸಂಪರ್ಕ ಸಂಖ್ಯೆಯನ್ನು ಸಂಗ್ರಹಿಸುವ ಗುರಿ ನೀಡಲಾಗಿದೆ. ಈ ಮೂಲಕ ಸಣ್ಣಪುಟ್ಟ ಧಾರ್ಮಿಕ ಸಂಸ್ಥೆಗಳ ಅನುಯಾಯಿಗಳನ್ನು ತಲುಪುವುದು ಉದ್ದೇಶ.
ಅದೇ ರೀತಿ ಪ್ರತಿ ಬೂತ್ ನಲ್ಲಿ 21 ಸದಸ್ಯರಿರುವ ಸಮಿತಿ ರಚನೆಯಾಗಲಿದ್ದು, ಸಮಿತಿಯಲ್ಲಿ ಎಸ್ಸಿ, ಎಸ್ಟಿ ಹಿಂದುಳಿದವರು, ಇಬ್ಬರು ಮಹಿಳೆಯರು ಇರಲೇಬೇಕೆಂದು ಸೂಚನೆ ನೀಡಲಾಗಿದೆ.

ಬೂತ್ ಆಯ್ಕೆ ಸಮಿತಿ ಆಗಸ್ಟ್ ಮೂರು ಮತ್ತು ನಾಲ್ಕನೇ ವಾರದಲ್ಲಿ ನಡೆಯಲಿದ್ದು, 29 ಲಕ್ಷ ಬೂತ್ ಮಟ್ಟದ ತಂಡ ಸಜ್ಜುಗೊಳಿಸಲಾಗುತ್ತಿದೆ ಎಂಬುದು ಅಲ್ಲಿನ ರಾಜ್ಯ ಘಟಕದ ಉಪಾಧ್ಯಕ್ಷ ಜೆ.ಪಿ.ಎಸ್. ರಾಥೋಡ್ ಅವರ ಅಭಿಪ್ರಾಯವಾಗಿದೆ. ಇನ್ನೊಂದೆಡೆ ಪ್ರತಿ ಮತಗಟ್ಟೆಗೂ ಪಕ್ಷ ಸಂಕೇತಗಳನ್ನು ನೀಡುತ್ತಿದ್ದು, ತನಗೆ ಅನುಕೂಲಕರವಾದ ಬೂತ್, ಸಾಧಾರಣ ಪರಿಸ್ಥಿತಿ ಇರುವ ಬೂತ್, ಕ್ಲಿಷ್ಟಕರ ಸನ್ನಿವೇಶದ ಬೂತ್ ಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಣ ಕೆಲಸ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...