alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾ ಹೊಂದಿದ್ದ ಖಾತೆಗಳು ಪನ್ನೀರ್ ಸೆಲ್ವಂ ಪಾಲಿಗೆ

tn-govt-allocates-jayas-portfolios-to-panneerselvam-until-she-takes-chargeಕಳೆದ ಎರಡು ವಾರಗಳಿಂದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರು ಹೊಂದಿದ್ದ ಪ್ರಮುಖ ಖಾತೆಗಳ ನಿರ್ವಹಣೆಯನ್ನು ತಾತ್ಕಾಲಿಕವಾಗಿ ಹಣಕಾಸು ಸಚಿವ ಓ. ಪನ್ನೀರ್ ಸೆಲ್ವಂ ಅವರಿಗೆ ವಹಿಸಲಾಗಿದೆ.

ಈ ಕುರಿತು ಅಧಿಕೃತ ಪ್ರಕಟಣೆಯನ್ನು ಮಂಗಳವಾರದಂದು ರಾಜಭವನದಿಂದ ಹೊರಡಿಸಲಾಗಿದ್ದು, ಜಯಲಲಿತಾರವರು ಹೊಂದಿದ್ದ ಖಾತೆಗಳನ್ನು ತಾತ್ಕಾಲಿಕವಾಗಿ ಪನ್ನಿರ್ ಸೆಲ್ವಂ ನಿರ್ವಹಿಸಲಿದ್ದಾರೆ. ಮುಖ್ಯಮಂತ್ರಿಯಾಗಿ ಜಯಲಲಿತಾರವರೇ ಮುಂದುವರೆಯಲಿದ್ದಾರೆಂದು ತಿಳಿಸಲಾಗಿದೆ. ಅನಾರೋಗ್ಯಕ್ಕೊಳಗಾಗಿರುವ ಮುಖ್ಯಮಂತ್ರಿ ಜಯಲಲಿತಾರವರು ಸೆಪ್ಟೆಂಬರ್ 22 ರಿಂದ ಅಪೊಲೋ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಗುಣಮುಖರಾಗಿ ಬರುವ ತನಕ ಪನ್ನೀರ್ ಸೆಲ್ವಂ, ಮುಖ್ಯಮಂತ್ರಿಯವರು ಹೊಂದಿದ್ದ ಖಾತೆಗಳನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಜಯಲಲಿತಾ ಅನಾರೋಗ್ಯದ ಹಿನ್ನಲೆಯಲ್ಲಿ ಸದ್ಯಕ್ಕೆ ಬದಲಿ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಳ್ಳುವಂತೆ ಪ್ರಮುಖ ಪ್ರತಿಪಕ್ಷ ಡಿಎಂಕೆ ನಾಯಕರು ಒತ್ತಾಯಿಸುತ್ತಿರುವ ಕಾರಣ ಈ ಬೆಳವಣಿಗೆ ನಡೆದಿದೆ. ಅಪೊಲೋ ಆಸ್ಪತ್ರೆಯ ತುರ್ತು ಚಿಕಿತ್ಸಾ ನಿಗಾ ಘಟಕದಲ್ಲಿರುವ ಜಯಲಲಿತಾರ ಆರೋಗ್ಯವನ್ನು ನವದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೂವರು ವೈದ್ಯರು ಹಾಗೂ ಬ್ರಿಟನ್ ನಿಂದ ಆಗಮಿಸಿರುವ ಡಾ. ರಿಚರ್ಡ್ ಜಾನ್ ಬೇಲಿ ನೋಡಿಕೊಳ್ಳುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...