alex Certify
ಕನ್ನಡ ದುನಿಯಾ       Mobile App
       

Kannada Duniya

ಸದನದೊಳಗೆ ಗುಟ್ಕಾ ತಂದ ಶಾಸಕರಿಗೆ ಸಂಕಷ್ಟ

ತಮಿಳುನಾಡು ವಿಧಾನಸಭೆಯ ಸವಲತ್ತುಗಳ ಸಮಿತಿ, ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಸೇರಿದಂತೆ ಡಿಎಂಕೆಯ 20 ಶಾಸಕರಿಗೆ ನೋಟಿಸ್ ಜಾರಿ ಮಾಡಿದೆ. ಜುಲೈ 19ರಂದು ಇವರು ಸದನದೊಳಗೆ ಗುಟ್ಕಾ ತೆಗೆದುಕೊಂಡು ಬಂದಿದ್ದರು.

ಚರ್ಚೆ ವೇಳೆ ಮಾತನಾಡಿದ ಸ್ಟಾಲಿನ್, ತಮಿಳುನಾಡು ಸರ್ಕಾರ ಗುಟ್ಕಾ ಮಾರಾಟ ತಡೆಯಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅಂತಾ ಆರೋಪಿಸಿದ್ದರು. ಈ ವೇಳೆ ಗುಟ್ಕಾ ಪ್ಯಾಕೆಟ್ ಗಳನ್ನು ಸದನದಲ್ಲಿ ಪ್ರದರ್ಶಿಸಿದ್ದರು. ಅದೊಂದು ನಿಷೇಧಿತ ವಸ್ತುವಾಗಿದ್ದು, ಗುಟ್ಕಾವನ್ನು ಸದನದೊಳಕ್ಕೆ ತರುವಂತಿಲ್ಲ.

ಹಾಗಾಗಿ ಸ್ಟಾಲಿನ್ ನಿಯಮ ಉಲ್ಲಂಘಿಸಿದ್ದಾರೆ ಅಂತಾ ಸ್ಪೀಕರ್ ಪಿ.ಧನಪಾಲ್ ಹೇಳಿದ್ದರು. ಈಗ 20 ಶಾಸಕರಿಗೆ ನೋಟಿಸ್ ನೀಡಿರುವ ಸಮಿತಿ, ಒಂದು ವಾರದಲ್ಲಿ ಉತ್ತರಿಸುವಂತೆ ಸೂಚಿಸಿದೆ. ನಿಷೇಧಿತ ಗುಟ್ಕಾ ಮಾರುಕಟ್ಟೆಯಲ್ಲಿ ಎಷ್ಟು ಸುಲಭವಾಗಿ ಲಭ್ಯವಾಗ್ತಿದೆ ಅನ್ನೋದನ್ನು ತೋರಿಸಲು ಅದನ್ನು ತಂದಿದ್ದಾಗಿ ಶಾಸಕರು ಸಮರ್ಥಿಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...