alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ನಲ್ಲೇ ಚಾಲಕರು, ನಿರ್ವಾಹಕನ ಪೈಶಾಚಿಕ ಕೃತ್ಯ

rape

ತಮಿಳುನಾಡಿನ ಸೇಲಂ ಬಳಿ ಬಸ್ ನಲ್ಲೇ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಇಬ್ಬರು ಚಾಲಕರು ಹಾಗೂ ಓರ್ವ ನಿರ್ವಾಹಕ ನೀಚ ಕೃತ್ಯ ಎಸಗಿದ್ದಾರೆ. ರಾತ್ರಿ ಗ್ರಾಮವೊಂದಕ್ಕೆ ಈ ಹಾಲ್ಟಿಂಗ್ ಬಸ್ ಆಗಮಿಸಿತ್ತು. ಇದೇ ಬಸ್ ನಲ್ಲಿದ್ದ ಚಾಲಕರು ಹಾಗೂ ಕಂಡಕ್ಟರ್ ಬಾಲಕಿಯ ಮೇಲೆರಗಿದ್ದಾರೆ.

ಬಾಲಕಿಯ ಅಳು ಕೇಳಿದ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಸೋಮವಾರ ಹೆತ್ತವರೊಂದಿಗೆ ಜಗಳವಾಡಿಕೊಂಡಿದ್ದ ಬಾಲಕಿ ಮನೆಬಿಟ್ಟು ಬಂದಿದ್ಲು. ಯಾವುದೋ ಲೋಕಲ್ ಬಸ್ ಹತ್ತಿ ಹೊರಟಿದ್ದಾಳೆ. ರಾತ್ರಿ ಬಸ್ ನಲ್ಲಿದ್ದ ಚಾಲಕ ಮನಿವಣ್ಣನ್, ಮುರುಗನ್ ಹಾಗೂ ನಿರ್ವಾಹಕ ಪೆರುಮಾಳ್ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದಾರೆ.

ಬಸ್ ಅನ್ನು ಗ್ರಾಮಕ್ಕೆ ತಂದು ನಿಲ್ಲಿಸಿದವರೇ ಆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂವರು ಕಾಮುಕರನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ಕೂಡ ಇಂಥದ್ದೇ ಪೈಶಾಚಿಕ ಕೃತ್ಯ ನಡೆದಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...