alex Certify
ಕನ್ನಡ ದುನಿಯಾ       Mobile App
       

Kannada Duniya

ಟಿಎಂಸಿ ಸಂಸದನ ಅತಿರೇಕದ ಅಭಿಮಾನ..!

tmc-mp

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟಿಎಂಸಿ ಸಂಸದರೊಬ್ಬರು ರವೀಂದ್ರನಾಥ್ ಠಾಗೋರ್, ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ ಅವರಂತಹ ರಾಷ್ಟ್ರ ನಾಯಕರಿಗೆ ಹೋಲಿಸಿದ್ದಾರೆ.

ಪ್ರತಿ ಮನೆಯಲ್ಲೂ ಮಮತಾ ಬ್ಯಾನರ್ಜಿ ಅವರ ಭಾವಚಿತ್ರವನ್ನು ಇಟ್ಟುಕೊಳ್ಬೇಕು ಅಂತಾ ಒತ್ತಾಯಿಸಿದ್ದಾರೆ. ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದ ಸಂಸದರಾಗಿರುವ ಇದ್ರಿಸ್ ಅಲಿ ತಾವೇ ಖುದ್ದು ಅತಿರೇಕದ ಅಭಿಮಾನ ತೋರಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಭಾವಚಿತ್ರವಿರುವ ಕುರ್ತಾ ಧರಿಸಿ ಸಂಸತ್ತಿಗೆ ಬಂದಿದ್ದಾರೆ. ದೀದಿ ಅತ್ಯಂತ ಜನಪ್ರಿಯ ನಾಯಕಿ, ಪ್ರತಿಪಕ್ಷಗಳನ್ನು ಮುನ್ನಡೆಸುತ್ತಿದ್ದಾರೆ. ನೋಟು ನಿಷೇಧದ ವಿರುದ್ಧ ಅವರು ಮೊದಲ ದಿನದಿಂದ್ಲೇ ಹೋರಾಟ ಆರಂಭಿಸಿದ್ದಾರೆ ಅಂತಾ ಇದ್ರಿಸ್ ಅಲಿ ಶ್ಲಾಘಿಸಿದ್ರು. ತುಂಬಾ ಸರಳ ಬದುಕು ನಡೆಸುತ್ತಿರುವ ಬಂಗಾಳ ಸಿಎಂ, ಬಡವರ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ ಎಂದ್ರು. ಮಮತಾ ಬ್ಯಾನರ್ಜಿ ಭಾವಚಿತ್ರವಿರುವ ಕುರ್ತಾ ಧರಿಸಿ ಬಂದ ತಮ್ಮನ್ನು ವಿವಿಧ ಪಕ್ಷದ ಸದಸ್ಯರು ಕೂಡ ಅಭಿನಂದಿಸಿದ್ದಾರೆ ಅಂತಾ ಇದ್ರಿಸ್ ಹೇಳಿಕೊಂಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...