alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಗೀತೆಗೆ ಅಗೌರವ ತೋರಿದ ಟಿಎಂಸಿ ಶಾಸಕಿ

tmc-mla

ತೃಣಮೂಲ ಕಾಂಗ್ರೆಸ್ ಶಾಸಕಿಯೊಬ್ಬರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ. ಹೌರಾದಲ್ಲಿ ನಡೆದ ಕ್ರೀಡಾ ಕಾರ್ಯಕ್ರಮವೊಂದರಲ್ಲಿ ಎಲ್ಲರೂ ರಾಷ್ಟ್ರಗೀತೆ ಹಾಡ್ತಾ ಇದ್ರೆ ಶಾಸಕಿ ಮಾತ್ರ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ರು.

ರಾಷ್ಟ್ರಗೀತೆಗೆ ಗೌರವ ಸಲ್ಲಿಸದೇ ಮೊಬೈಲ್ ನಲ್ಲಿ ಮಾತನಾಡುತ್ತಿದ್ದವರು ಮತ್ಯಾರೂ ಅಲ್ಲ, ಶಾಸಕಿ ವೈಶಾಲಿ ದಾಲ್ಮಿಯಾ. ಈಕೆ ಐಸಿಸಿ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷರಾಗಿದ್ದ ಜಗಮೋಹನ್ ದಾಲ್ಮಿಯಾ ಅವರ ಪುತ್ರಿ.

ಬೇಲೂರ್ ಪೊಲೀಸ್ ಠಾಣೆ ವತಿಯಿಂದ ಫುಟ್ಬಾಲ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ‘ಕಮಿಷನರ್ ಕಪ್’ ಹೆಸರಿನ ಪಂದ್ಯಾವಳಿ ಇದು. ಟೂರ್ನಿ ಉದ್ಘಾಟನೆಗೆ ಶಾಸಕಿ ವೈಶಾಲಿ ದಾಲ್ಮಿಯಾ ಕೂಡ ಆಗಮಿಸಿದ್ರು. ಸರತಿ ಸಾಲಿನಲ್ಲಿ ನಿಂತು ಎಲ್ಲರೂ ರಾಷ್ಟ್ರಗೀತೆ ಹಾಡುವಾಗ ಗೌರವ ಸೂಚಿಸಿದ್ರೆ ಶಾಸಕಿ ವೈಶಾಲಿ ದಾಲ್ಮಿಯಾ ಮಾತ್ರ ಫೋನ್ ನಲ್ಲಿ ಮಾತನಾಡುತ್ತಾ ಇದ್ದಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ರಾಷ್ಟ್ರಗೀತೆ ಹುಟ್ಟಿದ್ದು ಪಶ್ಚಿಮ ಬಂಗಾಳದಲ್ಲಿ, ಆದ್ರೂ ಬಂಗಾಳದ ಶಾಸಕಿಯೇ ಅದಕ್ಕೆ ಗೌರವ ಸೂಚಿಸ್ತಾ ಇಲ್ಲ ಅಂತಾ ಬಿಜೆಪಿ ಟೀಕಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...