alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿಯಲ್ಲಿ ವಿಜೃಂಭಣೆಯ ವೈಕುಂಠ ಏಕಾದಶಿ

t-tt-dd

ತಿರುಪತಿ: ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ, ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರ ದಂಡೇ ನೆರೆದಿತ್ತು.

ಸುಮಾರು 80,000 ಕ್ಕೂ ಅಧಿಕ ಭಕ್ತರು ವೈಕುಂಠ ದ್ವಾರದ ಮೂಲಕ ಸಾಗಿ, ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ.

ಆಂಧ್ರಪ್ರದೇಶ, ತೆಲಂಗಾಣದ ರಾಜಕೀಯ ಗಣ್ಯರು, ಉದ್ಯಮಿಗಳು, ಚಿತ್ರರಂಗದ ಗಣ್ಯರು ಆಗಮಿಸಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.

ಕರ್ನಾಟಕದ ಸಂಸದ ಶ್ರೀರಾಮುಲು, ಮಾಜಿ ಸಚಿವ ಜನಾರ್ಧನ ರೆಡ್ಡಿ, ಅವರ ಪುತ್ರಿ, ಅಳಿಯ ಕೂಡ ವೈಕುಂಠ ಏಕಾದಶಿ ಪ್ರಯುಕ್ತ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದುಕೊಂಡಿದ್ದಾರೆ.

ವೈಕುಂಠದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇರುವುದರಿಂದ ಅಪಾರ ಭಕ್ತರು ಆಗಮಿಸಿದ್ದು, ಟಿ.ಟಿ.ಡಿ. ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿತ್ತು.

ದ್ವಾದಶಿಯಂದೂ ವಿಶೇಷ ಪೂಜೆ ನೆರವೇರಲಿದ್ದು, ಹೆಚ್ಚಿನ ಭಕ್ತರು ದರ್ಶನ ಪಡೆಯಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...