alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿಗೆ ಕೇವಲ 44 ದಿನದಲ್ಲಿ ಹರಿದು ಬಂತು ದಾಖಲೆಯ ಆದಾಯ

tirupati eve

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯವಾಗಿರುವ ತಿರುಪತಿ ತಿರುಮಲ ದೇವಾಲಯಕ್ಕೆ ನಿತ್ಯವೂ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ಅದರಲ್ಲಿಯೂ, ವಿಶೇಷ ದಿನ, ಉತ್ಸವಗಳ ಸಂದರ್ಭದಲ್ಲಿ ತಿಮ್ಮಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.

ಹೀಗೆ ಬರುವ ಭಕ್ತರು, ತಮ್ಮ ಇಷ್ಟಾರ್ಥ ಸಿದ್ಧಿಗೆ ಕಾಣಿಕೆ ಅರ್ಪಿಸುತ್ತಾರೆ. ಹೀಗೆ ಕಳೆದ 44 ದಿನಗಳಲ್ಲಿ ಬರೋಬ್ಬರಿ 35 ಲಕ್ಷ ಮಂದಿ ಭಕ್ತರು ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೇ, 113 ಕೋಟಿ ರೂಪಾಯಿ ಕಾಣಿಕೆ ಬಂದಿದೆ. ಹೌದು, ಕೇವಲ 44 ದಿನಗಳ ಅವಧಿಯಲ್ಲಿ ತಿಮ್ಮಪ್ಪನ ಕಾಣಿಕೆ ಹುಂಡಿಗೆ ಬರೋಬ್ಬರಿ 113 ಕೋಟಿ ರೂಪಾಯಿ ಬಂದಿದ್ದು, ಇದುವರೆಗಿನ ದಾಖಲೆ ಆಗಿದೆ. ಮೇ 1 ರಿಂದ ಜೂನ್ 13ರವರೆಗೆ ದೇವಾಲಯಕ್ಕೆ ಬಂದಿರುವ ಭಕ್ತರು 113 ಕೋಟಿ ರೂ. ಕಾಣಿಕೆ ಅರ್ಪಿಸಿದ್ದಾರೆ.

ತಿರುಪತಿ ತಿರುಮಲಕ್ಕೆ ಬರುವ ಹೆಚ್ಚಿನ ಭಕ್ತರು ಮುಡಿ ಕೊಡುವುದು ವಾಡಿಕೆ. ಹೀಗೆ ಕೇಶ ಮುಂಡನ ಮಾಡಿಸಿಕೊಂಡ ಭಕ್ತರ ಸಂಖ್ಯೆ ಬರೋಬ್ಬರಿ 20 ಲಕ್ಷ. ಕಾಲು ನಡಿಗೆಯಲ್ಲಿ ಬೆಟ್ಟ ಹತ್ತಿದವರ ಸಂಖ್ಯೆ 12.5 ಲಕ್ಷ. ಪ್ರತಿದಿನ 75,000ದಿಂದ 1 ಲಕ್ಷ ಭಕ್ತರು ಈ ಅವಧಿಯಲ್ಲಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...