alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿಯಲ್ಲಿ ನಕಲಿ ಭಕ್ತರು ಅರೆಸ್ಟ್

Tirumala-Laddus

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆ ಹೊಂದಿರುವ ತಿರುಪತಿ, ತಿರುಮಲ ದೇವಾಲಯಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ. ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಹೀಗೆ ಬರುವ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಗುತ್ತದೆ.

ತಿರುಮಲದ ತಿಮ್ಮಪ್ಪನ ಸನ್ನಿಧಿಗೆ ಬಂದವರು ಲಡ್ಡು ಪ್ರಸಾದ ಪಡೆಯದೇ ಹೋಗುವುದಿಲ್ಲ. ಇತ್ತೀಚೆಗೆ ಲಡ್ಡು ಪ್ರಸಾದ ವಿತರಣೆಯ ಮೇಲೆ ನಿಯಂತ್ರಣ ಹೇರಲಾಗಿದೆ. ಇಬ್ಬರಿಗೆ ಇಷ್ಟೇ ಲಡ್ಡು ಎಂದು ನಿಯಂತ್ರಿಸಿದ್ದು, ಹೆಚ್ಚು ಲಡ್ಡು ಬೇಕಾದ ಭಕ್ತರಿಗೆ ಬ್ಲಾಕ್ ನಲ್ಲಿ ಮಾರಾಟ ಮಾಡುತ್ತಿದ್ದ 8 ಮಂದಿಯನ್ನು ಬಂಧಿಸಲಾಗಿದೆ. ಇವರು ದಿನಾಲು ಭಕ್ತರ ಸೋಗಿನಲ್ಲಿ ದೇವರ ದರ್ಶನ ಪಡೆದು ಲಡ್ಡು ಪ್ರಸಾದ ಸ್ವೀಕರಿಸುತ್ತಿದ್ದರು. ಕೌಂಟರ್ ನಲ್ಲಿ ಲಡ್ಡು ಪಡೆದುಕೊಂಡು ಬ್ಲಾಕ್ ನಲ್ಲಿ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ.

ದೇವಾಲಯ ಸಮೀಪವೇ ಲಡ್ಡು ವಿತರಣಾ ಕೇಂದ್ರದ ಬಳಿ ಹೆಚ್ಚಿನ ಬೆಲೆಗೆ ಲಡ್ಡು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಟಿ.ಟಿ.ಡಿ. ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ. ಕಾರ್ಯಾಚರಣೆ ನಡೆಸಿದ ಪೊಲೀಸರು 8 ಮಂದಿ ನಕಲಿ ಭಕ್ತರನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...