alex Certify
ಕನ್ನಡ ದುನಿಯಾ       Mobile App
       

Kannada Duniya

ವೈಕುಂಠ ಏಕಾದಶಿ: ತಿರುಪತಿಗೆ ಲಕ್ಷಾಂತರ ಭಕ್ತರು

tirupat

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯವಾಗಿರುವ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭಕ್ತ ಸಾಗರವೇ ಹರಿದು ಬಂದಿದೆ.

ಜನವರಿ 8 ಮತ್ತು 9 ರಂದು ವೈಕುಂಠ ಏಕಾದಶಿ, ದ್ವಾದಶಿ ಇದ್ದು, ಭೂ ವೈಕುಂಠನಾಥನ ದರ್ಶನ ಪಡೆಯಲು ಈಗಾಗಲೇ ಲಕ್ಷಾಂತರ ಭಕ್ತರು ತಿರುಮಲಕ್ಕೆ ಆಗಮಿಸಿದ್ದಾರೆ.

ವೈಕುಂಠ ಏಕಾದಶಿಯಂದು ತಿರುಮಲದಲ್ಲಿ ವೈಕುಂಠ ದ್ವಾರ ತೆರೆಯಲಿದ್ದು, ಅಂದು ಸ್ವಾಮಿಯ ದರ್ಶನ ಪಡೆದರೆ, ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

12-14 ಗಂಟೆಗಳ ಕಾಲ ದರ್ಶನಕ್ಕೆ ಕಾಯಬೇಕಿದ್ದು, ಭಕ್ತರಿಗೆ ತೊಂದರೆಯಾಗದಂತೆ ಟಿ.ಟಿ.ಡಿ. ಆಡಳಿತ ಮಂಡಳಿ ಸಕಲ ವ್ಯವಸ್ಥೆ ಮಾಡಿಕೊಂಡಿದೆ. ನಾರಾಯಣ ಗಿರಿ ಉದ್ಯಾನದಲ್ಲಿ ಸುಮಾರು 27 ಸಾವಿರ ಮಂದಿಗೆ ತಂಗಲು ಮತ್ತು ಉಪಹಾರ ವ್ಯವಸ್ಥೆ ಮಾಡಲಾಗಿದೆ.

ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಮಧ್ಯರಾತ್ರಿ 1 ಗಂಟೆ ಅವಧಿಯಲ್ಲಿ ಮಾತ್ರ ವಿ.ಐ.ಪಿ.ಗಳಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...