alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ತಿಮ್ಮಪ್ಪನಿಗೂ ಚಂದ್ರಗ್ರಹಣದ ಎಫೆಕ್ಟ್

t-t-d-ttd

ತಿರುಪತಿ: ಇಂದು ಚಂದ್ರಗ್ರಹಣ ಸಂಭವಿಸಲಿರುವ ಹಿನ್ನಲೆಯಲ್ಲಿ ತಿರುಪತಿ ತಿರುಮಲ ದೇವಾಲಯದಲ್ಲಿ ಶುದ್ಧೀಕರಣ ಕಾರ್ಯ ಕೈಗೊಳ್ಳಲಾಗಿದೆ.

ಸೋಮವಾರ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 4 ಗಂಟೆಯಿಂದ ಮರುದಿನ ಬೆಳಗಿನ ಜಾವ 4 ಗಂಟೆಯವರೆಗೆ ಸೇವೆಗಳನ್ನು ಬಂದ್ ಮಾಡಲಾಗುವುದು.

ಭಕ್ತರಿಗೆ ಮಂಗಳವಾರ ಬೆಳಿಗ್ಗೆವರೆಗೂ ದರ್ಶನ ಭಾಗ್ಯವಿರುವುದಿಲ್ಲ. ಅಲ್ಲದೇ, ಅನ್ನ ಪ್ರಸಾದ ವಿತರಣೆ, ಲಡ್ಡು ತಯಾರಿಕೆ ಸೇರಿದಂತೆ ಆಲಯದ ವಿವಿಧ ಸೇವೆ, ಕಾರ್ಯಗಳು ಸ್ಥಗಿತಗೊಳ್ಳಲಿವೆ.

ಶುದ್ಧೀಕರಣ ಕಾರ್ಯ ಪೂರ್ಣಗೊಂಡ ನಂತರ ಮಂಗಳವಾರ ಬೆಳಗಿನ ಜಾವ ಸುಪ್ರಭಾತ ಸೇವೆಯೊಂದಿಗೆ ಸ್ವಾಮಿಯ ದರ್ಶನ ಆರಂಭವಾಗಲಿದೆ ಎಂದು ಟಿ.ಟಿ.ಡಿ. ಪ್ರಮುಖರು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...