alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ತಿಮ್ಮಪ್ಪನಿಗೂ ಶುರುವಾಗಿದೆ ಸಂಕಷ್ಟ

ttd-td

ತಿರುಪತಿ: ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಹಳೆಯ ನೋಟುಗಳ ರಾಶಿಯೇ ಕಂಡು ಬಂದಿದೆ.

500 ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ ಗಳನ್ನು ಬದಲಿಸಿಕೊಳ್ಳಲು ಕಳೆದ ವರ್ಷ ಡಿಸೆಂಬರ್ ವರೆಗೂ ಅವಕಾಶ ನೀಡಿದ್ದು, ನಂತರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಳೆ ನೋಟ್ ಕಂಡು ಬಂದರೆ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಆದರೆ, ತಿಮ್ಮಪ್ಪನ ಸನ್ನಿಧಿಗೆ ಜನವರಿ, ಫೆಬ್ರವರಿಯಲ್ಲಿ ಬಂದ ಭಕ್ತರು ಕಾಣಿಕೆ ಸಲ್ಲಿಸಿದ್ದು, ಇದರಲ್ಲಿ 500 ರೂ, ಹಾಗೂ 1000 ರೂ ಮುಖಬೆಲೆಯ ಬರೋಬ್ಬರಿ 4 ಕೋಟಿ ರೂ ಸಂಗ್ರಹವಾಗಿದೆ.

ತಮ್ಮಲ್ಲಿರುವ ಹಳೆ ನೋಟು ವಿನಿಮಯಕ್ಕೆ ವಿನಾಯಿತಿ ನೀಡಬೇಕೆಂದು ಟಿ.ಟಿ.ಡಿ. ಆಡಳಿತ ಮಂಡಳಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.)ಗೆ ಪತ್ರ ಬರೆದಿದ್ದು, ಇನ್ನೂ ಉತ್ತರ ಸಿಕ್ಕಿಲ್ಲ.

ಭಕ್ತರು ಹಳೆ ನೋಟಿನ ಕಾಣಿಕೆ ಸಲ್ಲಿಸುತ್ತಿರುವುದು ಟಿ.ಟಿ.ಡಿ.ಗೆ ತಲೆನೋವಾಗಿದ್ದು, ಒಂದು ವೇಳೆ ಹಳೆ ನೋಟು ಸಂಗ್ರಹದ ಬಗ್ಗೆ ಕೇಸ್ ದಾಖಲಿಸುವುದಾದಲ್ಲಿ ಯಾರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...