alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿಯಾಗಲಿದೆ ತಿರುಪತಿ ತಿಮ್ಮಪ್ಪನ ದರ್ಶನ

tirupati

ತಿರುಪತಿ: ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೂ ನೋಟ್ ಬ್ಯಾನ್ ಬಿಸಿ ತಟ್ಟಿದೆ.

ಹೌದು, ನೋಟ್ ಬ್ಯಾನ್ ಬಳಿಕ ದೇವಾಲಯದ ಆದಾಯದಲ್ಲಿ ಕುಸಿತ ಉಂಟಾಗಿದೆ. ಈ ಹಿನ್ನಲೆಯಲ್ಲಿ ದೇವಾಲಯದಲ್ಲಿ ವಿವಿಧ ಸೇವೆಗಳ ಹಾಗೂ ದರ್ಶನದ ಟಿಕೆಟ್ ದರವನ್ನು ಹೆಚ್ಚಿಸಲು ಟಿ.ಟಿ.ಡಿ. ಆಡಳಿತ ಮಂಡಳಿ ತೀರ್ಮಾನಿಸಿದೆ.

ಭಕ್ತರು ಸಲ್ಲಿಸುತ್ತಿದ್ದ ಕಾಣಿಕೆ, ಚಿನ್ನಾಭರಣ, ದರ್ಶನದ ಟಿಕೆಟ್, ಠೇವಣಿ ಮೇಲಿನ ಬಡ್ಡಿ ಇವೇ ಮೊದಲಾದವುಗಳಿಂದ ಪ್ರತಿದಿನ ತಿರುಪತಿ ತಿಮ್ಮಪ್ಪನಿಗೆ 5 ಕೋಟಿ ರೂ.ವರೆಗೆ ಆದಾಯವಿತ್ತು.

ಆದರೆ, ನೋಟ್ ಬ್ಯಾನ್ ಬಳಿಕ ಭಕ್ತರ ಸಂಖ್ಯೆ ಇಳಿಮುಖವಾಗಿದ್ದು, ಆದಾಯದಲ್ಲಿಯೂ ಕಡಿಮೆಯಾಗಿದೆ. ದಿನದ ಆದಾಯದಲ್ಲಿ ಸುಮಾರು 2 ಕೋಟಿ ರೂ.ನಷ್ಟು ಕಡಿಮೆಯಾಗಿದೆ.

ಈ ಹಿನ್ನಲೆಯಲ್ಲಿ ದರ್ಶನದ ಟಿಕೆಟ್ ಹಾಗೂ ವಿವಿಧ ಸೇವೆಗಳ ಟಿಕೆಟ್ ದರವನ್ನು 5-10 ರೂ. ಹೆಚ್ಚಳ ಮಾಡಲು ಆಡಳಿತ ಮಂಡಳಿ ತೀರ್ಮಾನಿಸಿದ್ದು, ಸರ್ಕಾರದ ಒಪ್ಪಿಗೆ ಕೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...