alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಕೇಂದ್ರದ ರೆಡ್ ಸಿಗ್ನಲ್

tirumala

ತಿರುಪತಿ: ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರ, ಕಲಿಯುಗದ ವೈಕುಂಠ ಎಂದೇ ಕರೆಯಲ್ಪಡುವ ತಿರುಪತಿ, ತಿರುಮಲದ ಭಕ್ತರು, ಮಾಡಿದ್ದ ಮನವಿಗೆ ಕೇಂದ್ರ ಸರ್ಕಾರ ರೆಡ್ ಸಿಗ್ನಲ್ ನೀಡಿದ್ದು, ತಿರುಮಲದ ಮೇಲೆ ನೋ ಫ್ಲೈಯಿಂಗ್ ಝೋನ್ ಘೋಷಿಸಲು ನಿರಾಕರಿಸಿದೆ.

 

ಆಗಮಶಾಸ್ತ್ರದ ಪ್ರಕಾರ ತಿರುಮಲದ ದೇವಸ್ಥಾನದ ಮೇಲೆ, ವಿಮಾನಗಳು ಹಾರಾಟ ನಡೆಸುವಂತಿಲ್ಲ. ಗರ್ಭಗುಡಿಯ ಮೇಲೆ ಯಾವುದೇ ಯಾಂತ್ರೀಕೃತ ವಾಹನಗಳಲ್ಲಿ ಮಾನವರು ಹಾರಾಟ ನಡೆಸುವಂತಿಲ್ಲ. ಈ ಪ್ರದೇಶದಲ್ಲಿ ವಿಮಾನ ಹಾರಾಟ ನಡೆಸಿದರೆ, ಅಪಶಕುನ ಎಂಬ ನಂಬಿಕೆ ಇದ್ದು, ಈ ಹಿನ್ನಲೆಯಲ್ಲಿ ತಿರುಮಲವನ್ನು ನೋ ಫ್ಲೈಯಿಂಗ್ ಝೋನ್ ಎಂದು ಘೋಷಿಸಲು ದೇವಾಲಯದ ಆಡಳಿತ ಮಂಡಳಿ ಹಾಗೂ ಭಕ್ತರು ಮನವಿ ಮಾಡಿದ್ದರು. ಆದರೆ, ಭೌಗೋಳಿಕ ಮತ್ತು ತಾಂತ್ರಿಕ ಕಾರಣಗಳಿಂದ ವಿಮಾನ ಹಾರಾಟ ಮಾಡಬೇಕಾಗುತ್ತದೆ ಎಂದು ಕೇಂದ್ರ ವಿಮಾನಯಾನ ಸಚಿವಾಲಯ ಹೇಳಿದೆ ಎನ್ನಲಾಗಿದೆ.

 

ಇದನ್ನು ವಿರೋಧಿಸಿ ತಿರುಪತಿಯಲ್ಲಿ ಭಕ್ತರು ಪ್ರತಿಭಟನೆ ನಡೆಸಿದ್ದು, ಯಾವುದೇ ಕಾರಣಕ್ಕೂ ತಿರುಮಲದ ಮೇಲೆ ವಿಮಾನ ಹಾರಾಟ ಮಾಡದಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...