alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ದೇವಾಲಯದ ಕಂಪ್ಯೂಟರ್ ಗೆ ವೈರಸ್ ಅಟ್ಯಾಕ್

tirupati-balaji-temple

ವಿಶ್ವದ ಸೈಬರ್ ವ್ಯವಸ್ಥೆಗೆ ನಡುಕ ಹುಟ್ಟಿಸಿರುವ ವಾನ್ನಾ ಕ್ರೈ ರಾನ್ಸಮ್ವೇರ್ ವೈರಸ್ ತಿರುಪತಿ ತಿಮ್ಮಪ್ಪನ ಸನ್ನಿಧಿಗೂ ಕಾಲಿಟ್ಟಿದೆ. ತಿರುಪತಿ ದೇವಾಲಯದ ಕಂಪ್ಯೂಟರ್ ಗೆ ಹ್ಯಾಕರ್ ಗಳು ಕನ್ನ ಹಾಕಿದ್ದಾರೆ. ದೇವಾಲಯದ ಆಡಳಿತ ಮಂಡಳಿ ಬಳಸುತ್ತಿದ್ದ 10 ಕಂಪ್ಯೂಟರ್ ಗಳಿಗೆ ವೈರಸ್ ಅಟ್ಯಾಕ್ ಆಗಿದ್ದು, ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ.

ಉಳಿದ 20 ಕಂಪ್ಯೂಟರ್ ಗಳ ಕೆಲಸವನ್ನು ಕೂಡ ದೇವಾಲಯದ ಆಡಳಿತ ಮಂಡಳಿಯ ಸಿಬ್ಬಂದಿ ಸ್ಥಗಿತಗೊಳಿಸಿದ್ದಾರೆ. ದೇವಾಲಯದ ಕೆಲವು ಕಂಪ್ಯೂಟರ್ ಗಳು ವಾನ್ನಾ ಕ್ರೈ ವೈರಸ್ ದಾಳಿಗೊಳಗಾಗಿರೋ ವಿಷಯವನ್ನು ಟಿಟಿಡಿ ನೂತನ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಲ್ ಕೂಡ ದೃಢಪಡಿಸಿದ್ದಾರೆ.

ಟಿಕೆಟ್ ಮಾರಾಟ ಹಾಗೂ ಭಕ್ತರಿಗೆ ಸಂಬಂಧಪಟ್ಟ ಉಳಿದ ಸೇವೆಗಳಿಗಾಗಿ ಬಳಸುತ್ತಿದ್ದ ಕಂಪ್ಯೂಟರ್ ಗಳ ಮೇಲೆ ವೈರಸ್ ದಾಳಿಯಾಗಿದೆ. ಆದ್ರೆ ಇದರಿಂದ ಭಕ್ತರಿಗೆ ಯಾವುದೇ ತೊಂದರೆಯಾಗುವುದಿಲ್ಲ ಅಂತಾ ತಿಳಿಸಿದ್ದಾರೆ. ಟಿಟಿಡಿಯ ಮಾಹಿತಿ ತಂತ್ರಜ್ಞಾನ ವಿಭಾಗ, ಟಿಸಿಎಸ್ ಜೊತೆಗೆ ಸಂಪರ್ಕದಲ್ಲಿದ್ದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...