alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ದಾಖಲೆಗೆ ಪಾತ್ರವಾದ ತಿರುಪತಿ ಲಡ್ಡು

Tirumala-Laddus

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ತಿರುಪತಿ ತಿರುಮಲ ದೇವಾಲಯ ಮತ್ತೊಂದು ದಾಖಲೆಗೆ ಪಾತ್ರವಾಗಿದೆ. ಕೇವಲ 1 ತಿಂಗಳ ಅವಧಿಯಲ್ಲಿ ಬರೋಬ್ಬರಿ 1 ಕೋಟಿ ಲಡ್ಡು ಮಾರಾಟ ಮಾಡಿದೆ.

ಮೇ ತಿಂಗಳಲ್ಲಿ ತಿರುಪತಿಗೆ ಬರುವ ಭಕ್ತರ ಸಂಖ್ಯೆಯಲ್ಲೂ ದಾಖಲೆ ಬರೆದಿದೆ. ಬೇಸಿಗೆ ರಜೆ ಇದ್ದ ಕಾರಣ, ಭಕ್ತರು ಪ್ರವಾಹೋಪಾದಿಯಲ್ಲಿ ಹರಿದು ಬಂದಿದ್ದು, ತಿರುಪತಿ, ತಿರುಮಲದ ಅಂಕಿ ಅಂಶಗಳ ಪ್ರಕಾರ, ಮೇ ನಲ್ಲಿ 25.89 ಲಕ್ಷ ಭಕ್ತರು ದೇವಾಲಯಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಇದುವರೆಗಿನ ಮೇ ತಿಂಗಳ ಅವಧಿಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಭಕ್ತರು ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ.

ಇನ್ನು ತಿರುಪತಿ ಲಡ್ಡು ಪ್ರಸಾದ ಮಾರಾಟದಲ್ಲಿ ದಾಖಲೆ ಬರೆದಿದ್ದು, ಮೇನಲ್ಲಿ 1 ಕೋಟಿ ಲಡ್ಡು ಮಾರಾಟವಾಗಿವೆ. ಮೇ 28ರಂದು ಒಂದೇ ದಿನ 4.5 ಲಕ್ಷ ಲಡ್ಡು ವಿತರಿಸಲಾಗಿದೆ. ಕಳೆದ ವರ್ಷಗಳ ಮೇ ತಿಂಗಳ ಲಡ್ಡು ಮಾರಾಟ ಹೀಗಿದೆ.

2013ರಲ್ಲಿ 72.33 ಲಕ್ಷ, 2014ರಲ್ಲಿ 80.64 ಲಕ್ಷ, 2015ರಲ್ಲಿ 89.84 ಲಕ್ಷ ಲಡ್ಡು ಮಾರಾಟವಾಗಿವೆ. ತಿರುಪತಿಗೆ ಬರುವ ಭಕ್ತರಿಗೆ ತಲಾ 20 ರೂ. ದರದಲ್ಲಿ 2 ಲಡ್ಡು ನೀಡಲಿದ್ದು, 2ಕ್ಕಿಂತ ಹೆಚ್ಚು ಲಡ್ಡು ಬೇಕಾದಲ್ಲಿ ಒಂದಕ್ಕೆ 50 ರೂ. ಕೊಡಬೇಕಿದೆ. ಒಬ್ಬರಿಗೆ 4ಕ್ಕಿಂತ ಹೆಚ್ಚಿನ ಲಡ್ಡು ನೀಡಲಾಗುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...