alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾ ! ಕೂದಲಿನಿಂದಲೇ ಬಂತು 5.71 ಕೋಟಿ ರೂ.ಆದಾಯ

Hair business at tirumala

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿ, ತಿರುಮಲ ದೇವಾಲಯಕ್ಕೆ ನಿತ್ಯವೂ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ವಿಶೇಷ ದಿನ, ಉತ್ಸವಗಳ ಸಂದರ್ಭದಲ್ಲಿ ತಿಮ್ಮಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.

ಹೀಗೆ ಬರುವ ಭಕ್ತರು, ತಮ್ಮ ಇಷ್ಟಾರ್ಥ ಸಿದ್ಧಿಗೆ ಕಾಣಿಕೆ ಅರ್ಪಿಸುತ್ತಾರೆ. ಅಲ್ಲದೇ, ಮುಡಿ ಕೊಡುತ್ತಾರೆ. ತಿರುಪತಿ, ತಿರುಮಲಕ್ಕೆ ಬರುವ ಹೆಚ್ಚಿನ ಭಕ್ತರು ಮುಡಿ ಕೊಡುವುದು ವಾಡಿಕೆ. ಹೀಗೆ ಭಕ್ತರು ಕೇಶ ಮುಂಡನ ಮಾಡಿಸಿಕೊಂಡ ಕೂದಲಿನಿಂದಲೇ ದೇವಾಲಯದ ಆಡಳಿತ ಮಂಡಳಿಗೆ ಬರೋಬ್ಬರಿ 5.71 ಕೋಟಿ ರೂಪಾಯಿ ಆದಾಯ ಬಂದಿದೆ. ಏಪ್ರಿಲ್ ತಿಂಗಳಲ್ಲಿ ಕೂದಲು ಮಾರಾಟದಿಂದ ತಿರುಪತಿ, ತಿರುಮಲ ದೇವಾಲಯಕ್ಕೆ 5.71 ಕೋಟಿ ರೂ. ಆದಾಯ ಬಂದಿದೆ ಎಂದು ಟಿ.ಟಿ.ಡಿ. ಅಧ್ಯಕ್ಷ ಡಾ. ಚದಲವಾಡ ಕೃಷ್ಣಮೂರ್ತಿ ತಿಳಿಸಿದ್ದಾರೆ.

ತಿರುಮಲದಲ್ಲಿ ನಡೆದ ದೇವಾಲಯದ ಆಡಳಿತ ಮಂಡಳಿ ಸಭೆಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಏಪ್ರಿಲ್ ನಲ್ಲಿ 5.71 ಕೋಟಿ ರೂ. ಆದಾಯ ಕೂದಲು ಮಾರಾಟದಿಂದ ಬಂದಿದೆ. ಅಲ್ಲದೇ, ಆಲಿಪಿರಿಯಲ್ಲಿ 14.5 ಕೋಟಿ ರೂ ವೆಚ್ಛದಲ್ಲಿ ಸ್ಟುಡಿಯೋ ನಿರ್ಮಾಣ ಸೇರಿದಂತೆ, ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...