alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ತಿಮ್ಮಪ್ಪನ ಭಕ್ತರಿಗೊಂದು ಸುದ್ದಿ

ttd

ಹೈದರಾಬಾದ್ : ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿ, ತಿರುಮಲ ದೇವಾಲಯದಲ್ಲಿ ಅಕ್ಟೋಬರ್ 3 ರಿಂದ 11 ರವರೆಗೆ ವಾರ್ಷಿಕ ಬ್ರಹ್ಮೋತ್ಸವ ನಡೆಯಲಿದೆ.

ಅಕ್ಟೋಬರ್ 7, 8 ರಂದು ತಿರುಮಲದಲ್ಲಿ ವಿಶೇಷ ದರ್ಶನ ಇರುವುದಿಲ್ಲ. ಟಿ.ಟಿ.ಡಿ. ಕಾರ್ಯನಿರ್ವಹಣಾಧಿಕಾರಿ ಡಿ. ಸಾಂಬಶಿವ ರಾವ್ ಅವರು, ಈ ಕುರಿತು ಮಾಹಿತಿ ನೀಡಿದ್ದು, ದೇವಾಲಯದಲ್ಲಿ ಅಕ್ಟೋಬರ್ 7 ರಂದು ಗರುಡ ಸೇವೆ, 8 ರಂದು ಪೆರಟ್ಟಸಿ ಶನಿವಾರ ನಡೆಯಲಿರುವುದರಿಂದ 300 ರೂಪಾಯಿ ಟಿಕೆಟ್ ದರದ ಶೀಘ್ರ ದರ್ಶನ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಅಕ್ಟೋಬರ್ 7, 8 ರಂದು ಹೊರತುಪಡಿಸಿ, ಉಳಿದ ದಿನಗಳಲ್ಲಿ ಭಕ್ತರ ಸಂಖ್ಯೆಯನ್ನು ನೋಡಿಕೊಂಡು ಶೀಘ್ರ ದರ್ಶನ ಟಿಕೆಟ್ ನೀಡಲಾಗುವುದು. ಬ್ರಹ್ಮೋತ್ಸವ ನಡೆಯುವ ದಿನಗಳಲ್ಲಿ ಅಂಗವಿಕಲರು, ವೃದ್ಧರು, ಚಿಕ್ಕ ಮಕ್ಕಳಿರುವ ಪೋಷಕರಿಗೆ ಮಾತ್ರ ವಿಶೇಷ ದರ್ಶನ ಸೌಲಭ್ಯ ಇರುತ್ತದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...