alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ

ttd-d-ttd

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಸಿಹಿಸುದ್ದಿಯೊಂದನ್ನು ಟಿ.ಟಿ.ಡಿ. ನೀಡಿದೆ.

ಎಲ್ಲಾ ಭಕ್ತರಿಗೂ ಎಲ್ಲಾ ಸೇವೆಯನ್ನು ಸಲ್ಲಿಸುವ ಭಾಗ್ಯವನ್ನು ಒದಗಿಸಿದೆ. ಇಷ್ಟು ದಿನ ವಿ.ಐ.ಪಿ.ಗಳಿಗೆ ಮಾತ್ರವಿದ್ದ ಕೆಲವು ವಿಶೇಷ ಪಾವತಿ ಸೇವೆಗಳನ್ನು ಸಾಮಾನ್ಯರಿಗೂ ಸಿಗುವಂತೆ ಮಾಡಿದೆ.

ಸುಪ್ರಭಾತ, ತೋಮಲ, ನಿಜಪಾದ, ಅಷ್ಟದಳ ಪಾದಪದ್ಮಾರಾಧನಾ ಮೊದಲಾದ ಸೇವೆಗಳು ಇನ್ನು ಮುಂದೆ ಸಾಮಾನ್ಯರಿಗೂ ಸಿಗಲಿವೆ.

ಆನ್ ಲೈನ್ ನಲ್ಲಿ 10,710 ಟಿಕೆಟ್ ಗಳನ್ನು ಮಾರಾಟಕ್ಕಿಟ್ಟಿದ್ದು, ಇಲ್ಲಿ ಭಕ್ತರು ನೋಂದಣಿ ಮಾಡಿಕೊಳ್ಳಬೇಕು. ಜೂನ್ 23 ರಂದು ಲಕ್ಕಿ ಡಿಪ್ ನಲ್ಲಿ ಭಕ್ತರನ್ನು ಆಯ್ಕೆ ಮಾಡಲಿದ್ದು, ಸೇವೆಗೆ ನಿಗದಿಪಡಿಸಿದ ಮೊತ್ತವನ್ನು ಪಾವತಿಸಿ ಪೂಜೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ಹಳೆಯ ನಿಯಮಗಳನ್ನು ಬದಲಿಸಿ ಸಾಮಾನ್ಯರಿಗೂ ವಿಶೇಷ ಪಾವತಿ ಸೇವೆ ಲಭ್ಯವಾಗುವಂತೆ ಟಿ.ಟಿ.ಡಿ. ಮಾಡಿದ್ದು, ಇಂದಿನಿಂದಲೇ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...