alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ವಾನಕ್ಕೆ ಹುಟ್ಟು ಹಬ್ಬದ ಶುಭಾಶಯ ಕೋರಿ ಫ್ಲೆಕ್ಸ್…!

ರಾಜಕಾರಣಿಗಳ ಫ್ಲೆಕ್ಸ್ ಗಳನ್ನು ನೋಡಿ ನೋಡಿ ಬೇಸತ್ತಿದ್ದವರಿಗೆ ವಿಭಿನ್ನ ಸುದ್ದಿಯೊಂದು ಇಲ್ಲಿದೆ. ಸಣ್ಣ ಪುಟ್ಟ ಕಾರಣಕ್ಕೆಲ್ಲಾ ಫ್ಲೆಕ್ಸ್ ಹಾಕಿ ಅದರಲ್ಲಿ ತಮ್ಮ ಫೋಟೋಗಳನ್ನು ಹಾಕಿಸಿಕೊಂಡು ಪ್ರಚಾರ ಪಡೆಯುತ್ತಿದ್ದವರಿಗೆ ಸೆಡ್ಡು ಹೊಡೆಯುವಂತೆ ಮುಂಬೈ ನಿವಾಸಿಗಳು ಈ ಫ್ಲೆಕ್ಸ್ ಹಾಕಿದ್ದಾರೆ.

ಮುಂಬೈನ ಕಲ್ಯಾಣ್ ನಿವಾಸಿಗಳು ‘ಮ್ಯಾಕ್ಸ್ ಭಾಯ್’ ಎಂಬ ಶ್ವಾನಕ್ಕೆ ಹುಟ್ಟು ಹಬ್ಬದ ಶುಭ ಕೋರಿದ ದೊಡ್ಡ ಫ್ಲೆಕ್ಸ್ ಹಾಕಿಸಿದ್ದಾರೆ. ಅಷ್ಟೇ ಅಲ್ಲ ‘ಮ್ಯಾಕ್ಸ್ ಭಾಯ್’ ಗೆ ಶುಭ ಕೋರಿದ ‘ಟೈಸನ್ ಭಾಯ್’, ಡೇಂಜರ್ ಭಾಯ್’, ‘ಸ್ಯಾಮ್ ಭಾಯ್’, ‘ಪ್ರಿನ್ಸ್ ಭಾಯ್’ ಹಾಗೂ ‘ಸ್ವೀಟಿ ತಾಯ್’ ಎಂಬ ಶ್ವಾನಗಳ ಫೋಟೋವನ್ನೂ ಇದರಲ್ಲಿ ಹಾಕಲಾಗಿದೆ.

ಈ ವಿಭಿನ್ನ ಫ್ಲೆಕ್ಸ್ ಎಲ್ಲರ ಗಮನ ಸೆಳೆದಿದ್ದು, ಮಾಧ್ಯಮಗಳಲ್ಲೂ ವರದಿಯಾಗಿದೆ. ಸಣ್ಣ ಪುಟ್ಟದ್ದಕ್ಕೆಲ್ಲಾ ಫ್ಲೆಕ್ಸ್ ಹಾಕಿಸಿ ಪ್ರಚಾರ ಪಡೆಯುವವರಿಗೆ ಬುದ್ದಿ ಕಲಿಸಲೆಂಬಂತೆ ಈ ಫ್ಲೆಕ್ಸ್ ಹಾಕಲಾಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...