alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಹಾರದಲ್ಲಿ ವಿಭಿನ್ನ ತಿರಂಗಾ ಯಾತ್ರಾ…!

72ನೇ ಸ್ವಾತಂತ್ರ್ಯದಿನೋತ್ಸವ ಆಚರಣೆಗೂ ಮೊದಲು ಬಿಹಾರದ ಜೆಹ್ನಾಬಾದ್ ನಲ್ಲಿ ಸ್ವಾತಂತ್ರ್ಯ ಸಂಭ್ರಮ ಕಳೆಕಟ್ಟಿದೆ. ಆಗಸ್ಟ್ 14ರಂದು ಏಕ್ ರೋಟಿ ಹೆಸರಿನ ಬಿಹಾರದ ಸ್ಥಳೀಯ ಸಂಘಟನೆಯೊಂದು ಹಿಂದೆಂದ ಕಾಣದ ರೀತಿಯಲ್ಲಿ ವಿಭಿನ್ನವಾಗಿ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಿದೆ. ಒಂದು ಕಿಲೋಮಿಟರ್ ಉದ್ದದ ರಾಷ್ಟ್ರಧ್ವಜವನ್ನು ಮೆರವಣಿಗೆ ಮಾಡುತ್ತಾ ಜೆಹ್ನಾಬಾದ್ ನ ಪ್ರಮುಖ ಬೀದಿಗಳಲ್ಲಿ ಸಂಚರಿಸಿದೆ.

ಈ ಅಭೂತಪೂರ್ವ ಮೆರವಣಿಗೆಯಲ್ಲಿ ಅನೇಕ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ದೇಶಭಕ್ತಿಗೀತೆಗಳನ್ನು ಹಾಡುತ್ತಾ ದೇಶಪ್ರೇಮವನ್ನು ಉಜ್ವಲಗೊಳಿಸುವ ಕಾರ್ಯವನ್ನ ಮಾಡಲಾಯ್ತು. ಒಂದು ಕಿಲೋಮೀಟರ್ ಉದ್ದದ ತಿರಂಗಾ ಬಾವುಟದ ಮೆರವಣಿಗೆಯ ವಿಡಿಯೋ ಈಗ ಯೂಟ್ಯೂಬ್ನಲ್ಲೂ ಹರಿದಾಡ್ತಿದೆ.

ಜಿಲ್ಲಾಧಿಕಾರಿಗಳ ಗೃಹದಿಂದ ಆರಂಭವಾದ ಯಾತ್ರೆ ಗಾಂಧಿ ಮೈದಾನದಲ್ಲಿ ಅಂತ್ಯವಾಯ್ತು. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಈ ಸಮಾರಂಭದ ನೇತೃತ್ವ ವಹಿಸಿದ್ರೆ ಬಿಹಾರದ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...