alex Certify
ಕನ್ನಡ ದುನಿಯಾ       Mobile App
       

Kannada Duniya

ತಿಹಾರ್ ಜೈಲಿನ ಪುರುಷ ಖೈದಿಗಳಿಗೆ ಮಹಿಳಾ ಅಧೀಕ್ಷಕಿ

Police stand guard at one of the gates of the Tihar Jail in New Delhi March 11, 2013. The driver of the bus in which a young Indian woman was gang-raped and fatally injured in December hanged himself in his jail cell on Monday, prison authorities said, but his family and lawyer said they suspected "foul play". Ram Singh, the main accused in India's most high-profile criminal case, killed himself in a cell he shared with three other inmates in New Delhi's Tihar jail just before dawn, prison spokesman Sunil Gupta said. REUTERS/Mansi Thapliyal (INDIA - Tags: CRIME LAW MILITARY)

ದೊಡ್ಡ ದೊಡ್ಡ ಕ್ರಿಮಿನಲ್ ಗಳನ್ನು ಹಿಡಿದಿಟ್ಟುಕೊಂಡಿರುವ ತಿಹಾರ್ ಜೈಲಿನ ಮೇಲ್ವಿಚಾರಣೆಯನ್ನು ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರಿಗೆ ವಹಿಸಲಾಗಿದೆ. ಅಂಜು ಮಂಗ್ಲಾ ಈಗ ತಿಹಾರ್ ಜೈಲಿನ ಅಧೀಕ್ಷಕಿ. ಪುರುಷರ ಕಾರಾಗೃಹಕ್ಕೆ ಮಹಿಳಾ ಅಧಿಕಾರಿಯನ್ನು ವ್ಯವಸ್ಥಾಪಕಿಯನ್ನಾಗಿ ನೇಮಕ ಮಾಡಿರುವುದು ಇದೇ ಮೊದಲು.

ಇದಕ್ಕೂ ಮುನ್ನ ಕಿರಣ್ ಬೇಡಿ ಹಾಗೂ ವಿಮ್ಲಾ ಮೆಹ್ರಾ ತಿಹಾರ್ ಜೈಲಿನ ಡಿಜಿಯಾಗಿ ಕರ್ತವ್ಯ ನಿರ್ವಹಿಸಿದ್ರು. 18-21 ವರ್ಷ ವಯಸ್ಸಿನ 800 ಖೈದಿಗಳ ಮೇಲ್ವಿಚಾರಣೆಯ ಜವಾಬ್ಧಾರಿ ಈಗ ಅಧೀಕ್ಷಕಿ ಅಂಜು ಮಂಗ್ಲಾ ಅವರ ಮೇಲಿದೆ. ಅವರು ಖೈದಿಗಳ ಬಗ್ಗೆ ಕಠಿಣ ನಿಲುವು ತಳೆದಿದ್ದು, ದಕ್ಷ ಅಧಿಕಾರಿ ಅಂತಾ ಹೆಸರು ಮಾಡಿದ್ದಾರೆ.

ಈ ಹಿಂದೆ ಮಹಿಳಾ ಕಾರಾಗೃಹದಲ್ಲಿ ಅಂಜು ವ್ಯವಸ್ಥಾಪಕಿಯಾಗಿದ್ದರು. ಖೈದಿಗಳ ನಡುವೆ ವೈಯಕ್ತಿಕ ಬಾಂಧವ್ಯ ಬೆಳೆಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದ್ದಾರೆ. ಖೈದಿಗಳೆಲ್ಲ ತಮಗೆ ಮಕ್ಕಳಿದ್ದಂತೆ ಎಂದಿರುವ ಅಂಜು, ಯಾವುದೋ ಕೆಟ್ಟ ಘಳಿಗೆಯಲ್ಲಿ ತಪ್ಪು ಮಾಡಿ ಜೈಲು ಸೇರಿರುವ ಅವರಿಗೆ ಸನ್ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ಬೇಕಿದೆ ಅಂತಾ ಅಭಿಪ್ರಾಯಪಟ್ಟಿದ್ದಾರೆ. ಶಿಸ್ತಿಗೆ ಹೆಚ್ಚು ಆದ್ಯತೆ ಎಂದಿರುವ ಅಂಜು, ಜೈಲಿನಲ್ಲೇ ಖೈದಿಗಳಿಗೆ ಶಿಕ್ಷಣ ಮುಂದುವರಿಸಲು ಅವಕಾಶ ನೀಡಿರುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...