alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯರಿಂದ ಸಾಲ ವಸೂಲಿ ಮಾಡೋವರ್ಗೂ ದಂಡ ಕಟ್ಟಲ್ವಂತೆ ಈ ಮಹಿಳೆ

premlatha

ದೇಶದ ವಿವಿಧ ಬ್ಯಾಂಕುಗಳಿಂದ ಬರೋಬ್ಬರಿ 9 ಸಾವಿರ ಕೋಟಿ ರೂ. ಸಾಲ ಎತ್ತಿ ಈಗ ಉಂಡೆನಾಮ ತಿಕ್ಕಿ ವಿದೇಶಕ್ಕೆ ತೆರಳಿರುವ ವಿಜಯ್ ಮಲ್ಯ ಅವರ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ವಿವಿಧ ಜೋಕ್ಸ್ ಗಳು ಹರಿದಾಡುತ್ತಿವೆ. ಆದರೆ ಮುಂಬೈನ ಮಹಿಳೆ, ಮಾತ್ರ ಮಲ್ಯ ವಿಚಾರವನ್ನು ವಿಭಿನ್ನವಾಗಿ ಪ್ರಸ್ತಾಪಿಸಿದ್ದಾರೆ.

ಭಾನುವಾರದಂದು ಈ ಘಟನೆ ನಡೆದಿದ್ದು, ಪ್ರೇಮಲತಾ ಬನ್ಸಾಲಿ ಎಂಬ 44 ವರ್ಷದ ಮಹಿಳೆ ಮುಂಬೈ ಲೋಕಲ್ ರೈಲಿನಲ್ಲಿ 10 ರೂ. ಟಿಕೇಟ್ ಖರೀದಿಸದೆ ಪ್ರಯಾಣಿಸಿದ್ದಾರೆ. ಮಹಿಳಾ ಟಿಕೇಟ್ ಚೆಕ್ಕರ್ ಟಿಕೇಟ್ ಪರಿಶೀಲನೆಗೆ ಬಂದಿದ್ದು, ಟಿಕೇಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಪ್ರೇಮಲತಾರಿಗೆ 260 ರೂ. ಫೈನ್ ಕಟ್ಟುವಂತೆ ತಿಳಿಸಿದ್ದಾರೆ.

ಆಗ ಪ್ರೇಮಲತಾ, ಮಲ್ಯರಿಂದ ಮೊದಲು 9 ಸಾವಿರ ಕೋಟಿ ರೂ. ಸಾಲ ವಸೂಲಿ ಮಾಡಿ ಎಂದರಲ್ಲದೇ ಟಿಕೇಟ್ ಇಲ್ಲದೆ ಪ್ರಯಾಣಿಸುವವರಿಗೆ ಸರ್ಕಾರ ದಂಡ ವಿಧಿಸುತ್ತದೆ. ಆದರೆ ಮಲ್ಯರಂತಹ ಶ್ರೀಮಂತ ವ್ಯಕ್ತಿ ದೇಶದ ಬ್ಯಾಂಕುಗಳಿಗೆ ವಂಚಿಸಿ ವಿದೇಶಕ್ಕೆ ಹೋಗಲು ಹೇಗೆ ಅವಕಾಶ ಮಾಡಿಕೊಟ್ಟಿದೆ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ.

ಹಾಗೆಂದು ಪ್ರೇಮಲತಾರೇನು ಬಡವರಲ್ಲ. ಅವರು ವಾಸಿಸುವ ಫ್ಲಾಟ್ 5 ರಿಂದ 6 ಕೋಟಿ ರೂ. ಬೆಲೆ ಬಾಳುತ್ತದೆ ಎನ್ನಲಾಗಿದೆ. ಆದರೂ ಮಲ್ಯರ ವಿಚಾರವನ್ನಿಟ್ಟುಕೊಂಡು ಸುಮಾರು 12 ಗಂಟೆಗಳ ಕಾಲ ರೈಲ್ವೇ ಅಧಿಕಾರಿಗಳೊಂದಿಗೆ ವಾದ- ವಿವಾದ ನಡೆಸಿದ್ದು, ಕೊನೆಗೂ ದಂಡ ಪಾವತಿಸಿಲ್ಲ. ಅವರನ್ನು ಈಗ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...