alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ ಮಹಿಳೆ ಜೊತೆ ಟಿಸಿ ಅಸಭ್ಯ ವರ್ತನೆ

TC

ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಹಲವು ಸುಧಾರಿತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿ ರೂಪಿಸುತ್ತಿದ್ದಾರೆ. ಅಲ್ಲದೇ, ಟ್ವಿಟರ್ ಮೂಲಕ ನೊಂದವರು ಮಾಡುವ ಮನವಿಗಳಿಗೆ ತಕ್ಷಣದ ಸ್ಪಂದನೆ ತೋರಿ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರೈಲ್ವೇ ಸಚಿವರು ಇಲಾಖೆಯನ್ನು ಜನಸ್ನೇಹಿಯಾಗಿ ರೂಪಿಸುತ್ತಿದ್ದರೆ, ಕೆಲವು ನೌಕರರು ಪ್ರಯಾಣಿಕರೊಂದಿಗೆ ಅಮಾನವೀಯವಾಗಿ ವರ್ತಿಸುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ. ಇದಕ್ಕೆ ಉದಾಹರಣೆ ಎನ್ನುವಂತಹ ಘಟನೆಯೊಂದು ಮಧ್ಯಪ್ರದೇಶದ ಹರ್ದಾ ಎಂಬಲ್ಲಿ ನಡೆದಿದೆ. ಹೋಶಿಯಾರ್ ಪುರ್ ನಿಂದ ಬಹರನ್ ಪುರ್ ಗೆ ಹೊರಟಿದ್ದ ರೈಲಿನಲ್ಲಿ ಜನರಲ್ ಟಿಕೆಟ್ ಪಡೆದ ಮಹಿಳೆಯೊಬ್ಬರು ರಿಸರ್ವೇಶನ್ ಬೋಗಿಯಲ್ಲಿ ಹತ್ತಿದ್ದು, ಅಲ್ಲಿಗೆ ತಪಾಸಣೆಗೆ ಬಂದ ಟಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.

ಮಹಿಳೆಯೊಂದಿಗೆ ಆಕೆಯ ಪುತ್ರ, ಮಗಳು ಕೂಡ ಇದ್ದರು. ತಪ್ಪಾಯಿತು, ದಂಡ ಕಟ್ಟುತ್ತೇನೆ ಎಂದು ಮಹಿಳೆ ಪರಿಪರಿಯಾಗಿ ಬೇಡಿಕೊಂಡರೂ ಕರುಣೆ ತೋರದ ಟಿಸಿ ಅಶ್ಲೀಲವಾಗಿ ನಿಂದಿಸಿ, ಆಕೆಯ ಮಗನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಸಹ ಪ್ರಯಾಣಿಕರೊಬ್ಬರು ಮೊಬೈಲ್ ನಲ್ಲಿ ಈ ದೃಶ್ಯ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು, ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...