alex Certify
ಕನ್ನಡ ದುನಿಯಾ       Mobile App
       

Kannada Duniya

ಬೆವರಿನ ಬದಲು ಮಗುವಿನ ಅಂಗಾಂಗಗಳಿಂದ ಸುರಿಯುತ್ತಿದೆ ರಕ್ತ

girl_-hyderabad08

ಹೈದ್ರಾಬಾದ್ ನಲ್ಲಿ 3 ವರ್ಷದ ಹೆಣ್ಣು ಮಗುವೊಂದು ವಿಚಿತ್ರ ಖಾಯಿಲೆಯಿಂದ ಬಳಲುತ್ತಿದೆ. ಮಗುವಿನ ಕಣ್ಣಲ್ಲಿ ನೀರಿನ ಬದಲು ರಕ್ತ ಸುರಿಯುತ್ತಿದೆ. 16 ತಿಂಗಳುಗಳ ಹಿಂದೆ ಅಹನಾ ಅಫ್ಜಲ್ ಎಂಬ ಈ ಮಗುವಿನ ಮೂಗಿನಲ್ಲಿ ರಕ್ತ ಬರುತ್ತಿತ್ತು. ನಂತರ ಜ್ವರ ಕೂಡ ಕಾಣಿಸುತ್ತಿತ್ತು.

ನಂತರ ಮೂಗು, ಕಣ್ಣು, ಬಾಯಿ, ಕಿವಿ ಮತ್ತು ಗುಪ್ತಾಂಗಗಳಲ್ಲಿ ಆಗಾಗ ರಕ್ತ ಸುರಿಯಲಾರಂಭಿಸಿದೆ. ಅಹನಾಗೆ ಹೆಮಾಟಿಡೋಸಿಸ್ ಎಂಬ ಅಪರೂಪದ ಖಾಯಿಲೆ ಇರಬಹುದು ಅಂತಾ ವೈದ್ಯರು ಶಂಕಿಸಿದ್ದಾರೆ. ಈ ಖಾಯಿಲೆ ಬಂದ್ರೆ ಬೆವರಿನ ಬದಲು ರಕ್ತ ಸುರಿಯುತ್ತದೆ.

ಈ ರೋಗಕ್ಕೆ ಶಾಶ್ವತ ಪರಿಹಾರವಿಲ್ಲ ಅಂತಾನೂ ಹೇಳಲಾಗ್ತಿದೆ. ಮಗುವಿಗೆ ಚಿಕಿತ್ಸೆ ಮುಂದುವರಿದಿದ್ದು, ರಕ್ತ ಸುರಿಯುವಿಕೆ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ಇತರ ಆಸ್ಪತ್ರೆಗಳ ವೈದ್ಯರನ್ನು ಕೂಡ ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಪಡೆಯಲಾಗುತ್ತಿದೆ.

ಮಗುವಿನ ಸ್ಥಿತಿ ನೋಡಿ ಹೆತ್ತವರು ಕಂಗಾಲಾಗಿ ಹೋಗಿದ್ದಾರೆ. ಮಗಳನ್ನು ಉಳಿಸಿಕೊಡುವಂತೆ ವೈದ್ಯರಲ್ಲಿ ಬೇಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಹನಾಳ ಚಿಕಿತ್ಸೆಗೆ ನೆರವಾಗುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...