alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ ಸಹೋದರಿಯರ ಈ ದಂಧೆ

ಮೂವರು ಸಹೋದರಿಯರು ಮಾಡ್ತಿದ್ದ ಖತರ್ನಾಕ್ ಕೆಲಸ ನೋಡಿ ದೆಹಲಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಫೇಸ್ಬುಕ್ ನಲ್ಲಿ ಯಾರದ್ದೋ ಪ್ರೊಫೈಲ್ ನಲ್ಲಿರೋ ಫೋಟೋಗಳನ್ನು ಡೌನ್ಲೋಡ್ ಮಾಡಿ ಅದನ್ನು ಬಳಸಿಕೊಂಡು ಸೆಕ್ಸ್ ಚಾಟ್ ಮಾಡ್ತಿದ್ದ ಈ ಕಿಲಾಡಿ ಸಹೋದರಿಯರು ಲಕ್ಷಾಂತರ ರೂಪಾಯಿ ಹಣ ಗಳಿಸಿದ್ದಾರೆ.

ತನ್ನ ಫೋಟೋವನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ ಅಂತಾ ಮಹಿಳೆಯೊಬ್ಬಳು ದೂರು ನೀಡಿದ್ದಳು. ಈ ಪ್ರಕರಣದ ತನಿಖೆ ವೇಳೆ ಸಹೋದರಿಯರ ವಂಚನೆ ಬೆಳಕಿಗೆ ಬಂದಿದೆ. ಈ ಸಹೋದರಿಯರು ಸೆಕ್ಸ್ ಚಾಟ್ ಮಾಡಲು ಇಚ್ಛಿಸುವ ಪುರುಷರಿಂದ ಹಣ ಪಡೆದು, ಅವರಿಗೆ ಯಾರದ್ದೋ ಫೋಟೋ ಮತ್ತವರ ಸೋಶಿಯಲ್ ಮೀಡಿಯಾ ಲಿಂಕ್ ಕಳಿಸುತ್ತಿದ್ರು.

ಅದೇ ರೀತಿ ಮಹಿಳೆಯೊಬ್ಬಳಿಗೆ ಪದೇ ಪದೇ ಮೆಸೇಜ್ ಮಾಡುತ್ತಿದ್ದ ವ್ಯಕ್ತಿ ಸೆಕ್ಸ್ ಚಾಟ್ ಮಾಡುವಂತೆ ಕೇಳಿದ್ದ. ಅದಕ್ಕಾಗಿ ಹಣ ಪಾವತಿಸಿರುವುದಾಗಿಯೂ ತಿಳಿಸಿದ್ದ. ಇದನ್ನು ಕೇಳಿ ಆಘಾತಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ಲು. ಈ ಸಹೋದರಿಯರು ಸೆಕ್ಸ್ ಚಾಟ್ ಗಾಗಿ 500-5000 ರೂಪಾಯಿ ಪಡೆಯುತ್ತಿದ್ರು.

ಆನ್ ಲೈನ್ ಅಥವಾ ಪೇಟಿಎಂ ಮೂಲಕ ತಮ್ಮ ಖಾತೆಗೆ ಹಣ ಟ್ರಾನ್ಸ್ ಫರ್ ಮಾಡಿಸಿಕೊಳ್ಳುತ್ತಿದ್ರು. ಮೂಲತಃ ಇವರು ಫೈಜಾಬಾದ್ ನವರು ಅಂತಾ ಪೊಲೀಸರು ತಿಳಿಸಿದ್ದಾರೆ. ಓದಲು ಅಂತಾ ದೆಹಲಿಗೆ ಬಂದಿದ್ದ ಇವರು ಹಣ ಮಾಡಲು ಈ ದಂಧೆ ಶುರು ಮಾಡಿದ್ದರು. ಅವರ ಖಾತೆಯಲ್ಲಿ 11 ಲಕ್ಷ ರೂಪಾಯಿ ಪತ್ತೆಯಾಗಿದೆ. ಒಮ್ಮೆ ಮೂವರು ಬ್ಯಾಂಕಾಕ್ ಪ್ರವಾಸಕ್ಕೂ ಹೋಗಿ ಬಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...