alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಸೀರೆ ಉಟ್ಟ ಮಹಿಳೆಯರ ಬೈಕ್ ಸವಾರಿ

ಈ ಮಹಿಳೆಯರನ್ನು ನೋಡಿದ್ರೆ ಎಲ್ರೂ ಅಚ್ಚರಿಯಿಂದ ಹುಬ್ಬೇರಿಸ್ತಾರೆ, ಇನ್ನೊಂದಷ್ಟು ಮಂದಿ ಇವರ ಕಸರತ್ತನ್ನು ಮೆಚ್ಚಿಕೊಳ್ತಾರೆ. ಹೈದ್ರಾಬಾದ್ ನಲ್ಲಿ ಮೂವರು ಮಹಿಳೆಯರು ಬೈಕ್ ಸವಾರಿ ಮಾಡ್ತಿರೋ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡ್ತಿದೆ.

ವಿಶೇಷ ಅಂದ್ರೆ ಇವರಲ್ಲಿ ಇಬ್ಬರು ಸೀರೆ ಉಟ್ಕೊಂಡಿದ್ದಾರೆ. ಬೈಕ್ ಓಡಿಸ್ತಾ ಇರೋ ಮಹಿಳೆ ಸೀರೆ ಉಟ್ಟಿದ್ರು, ಹಿಂಬದಿ ಕುಳಿತಿರೋ ಇನ್ನೊಬ್ಬ ಮಹಿಳೆಯೂ ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿದ್ದಾಳೆ. ಇನ್ನೂ ಒಂದು ವಿಶೇಷ ಅಂದ್ರೆ ಇವರು ಸವಾರಿ ಮಾಡಿರೋದು ಸ್ಪೋರ್ಟ್ಸ್ ಬೈಕ್ ನಲ್ಲಿ.

ಇದು ಮಹಿಳೆಯರ ಸಾಹಸ ಅನ್ನೋದೇನೋ ನಿಜ, ಆದ್ರೆ ಅವರು ಸಂಚಾರ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ನಿಯಮದ ಪ್ರಕಾರ ಬೈಕ್ ನಲ್ಲಿ ಮೂವರು ಪ್ರಯಾಣಿಸುವಂತಿಲ್ಲ. ಹೆಲ್ಮೆಟ್ ಕೂಡ ಧರಿಸಬೇಕು. ಆದ್ರೆ ಹೆಲ್ಮೆಟ್ ಹಾಕಿಕೊಳ್ಳದೆ, ಒಂದೇ ಬೈಕ್ ನಲ್ಲಿ ಮೂವರು ರೈಡ್ ಮಾಡಿದ್ದಾರೆ. ಇದಕ್ಕೆ ಪೊಲೀಸರು ಏನ್ಹೇಳ್ತಾರೆ ಅನ್ನೋದೇ ಸದ್ಯದ ಕುತೂಹಲ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...