alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಗರೇಟ್ ಸೇವನೆಗೆ ಆಕ್ಷೇಪಿಸಿದ್ದಕ್ಕೆ ನಡೆದಿದೆ ಇಂತಹ ಕೃತ್ಯ

ಕೆಲಸ ಮಾಡುತ್ತಿದ್ದ ವೇಳೆ ಸಿಗರೇಟ್ ಸೇದುತ್ತಿದ್ದ ತನ್ನ ಸಹೋದ್ಯೋಗಿಗಳಿಗೆ ಹಾಗೇ ಮಾಡದಂತೆ ತಿಳಿ ಹೇಳಿದ್ದೇ ವ್ಯಕ್ತಿಯೊಬ್ಬನಿಗೆ ದುಬಾರಿಯಾಗಿ ಪರಿಣಮಿಸಿದೆ. ಇಷ್ಟಕ್ಕೇ ಆಕ್ರೋಶಗೊಂಡ ಸಹೋದ್ಯೋಗಿಗಳು ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಇಂತದೊಂದು ಘಟನೆ ಮುಂಬೈನ ಗೋವಂಡಿಯಲ್ಲಿ ಗುರುವಾರ ರಾತ್ರಿ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವ 25 ವರ್ಷದ ಜಾಫರ್ ಹುಸೇನ್ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾನೆ.

ಮದುವೆ ಮಂಟಪದ ಡೆಕೋರೇಷನ್ ಕಾರ್ಯ ನಿರ್ವಹಿಸುತ್ತಿದ್ದ ಇವರುಗಳೆಲ್ಲರೂ ಮದುವೆ ನಂತರ ಚೇರ್ ಗಳನ್ನು ಸಂಗ್ರಹಿಸುತ್ತಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಜಾಫರ್ ಹುಸೇನ್ ಶೇಕ್ ನ ಮೂವರು ಸಹೋದ್ಯೋಗಿಗಳು ಸಿಗರೇಟ್ ಸೇವನೆ ಆರಂಭಿಸಿದ್ದಾರೆ. ಇದಕ್ಕೆ ಆತ ಆಕ್ಷೇಪಿಸಿದ್ದು, ಮಾತಿನ ಚಕಮಕಿ ಆರಂಭಗೊಂಡಿದೆ.

ಮೂವರು ಆರೋಪಿಗಳು ಜಾಫರ್ ಹುಸೇನ್ ಶೇಕ್ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದು, ಆತ ಕೆಳಗೆ ಬಿದ್ದಾಗ ಓರ್ವ ಚಾಕುವಿನಿಂದ ಇರಿದಿದ್ದಾನೆ. ಆತನ ಚೀರಾಟ ಕೇಳಿ ಇತರೆ ಕೆಲಸಗಾರರು ಧಾವಿಸುವಷ್ಟರಲ್ಲಿ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಜಾಫರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿಗಳಾದ ರಶೀದ್ ಬಶೀರ್ ಖಾನ್, ಅಬ್ರಾರ್ ಶೇಕ್ ಹಾಗೂ ಇರ್ಶಾದ್ ಮೊಹಮ್ಮದ್ ರ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...