alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದ್ಯೋಗಿ ಮೇಲೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ವೈದ್ಯ

shashi-kumar_650x400_51454991772

ಹೈದರಾಬಾದ್: ತಾವು ಆರಂಭಿಸಿದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪಾಲುದಾರಿಕೆಗೆ ಸಂಬಂಧಿಸಿದಂತೆ ಮೂವರು ವೈದ್ಯರ ನಡುವೆ ನಡೆದ ವಾಗ್ವಾದದ ವೇಳೆ ವೈದ್ಯನೊಬ್ಬ ಪಾಲುದಾರನ ಮೇಲೆ ಗುಂಡು ಹಾರಿಸಿ ಬಳಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ವೈದ್ಯರುಗಳಾದ ಶಶಿ ಕುಮಾರ್, ಉದಯ್ ಕುಮಾರ್ ಹಾಗೂ ಸಾಯಿಕುಮಾರ್ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಿದ್ದರೆನ್ನಲಾಗಿದ್ದು, ಪಾಲುದಾರಿಕೆ ಸಂಬಂಧ ಮೂವರ ನಡುವೆಯೂ ಭಿನ್ನಾಭಿಪ್ರಾಯ ತಲೆದೋರಿತ್ತೆನ್ನಲಾಗಿದೆ.

ಈ ಸಂಬಂಧ ಮಾತನಾಡಲು ಮೂವರೂ ರೆಸ್ಟೋರೆಂಟ್ ಒಂದಕ್ಕೆ ತೆರಳಿದ್ದು, ಅಲ್ಲಿ ಜನಸಂದಣಿ ಇದ್ದ ಕಾರಣ ಹೊರಗಡೆ ಬಂದು ತಮ್ಮ ಕಾರಿನಲ್ಲಿ ಕುಳಿತಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಶಶಿಕುಮಾರ್ ತಮ್ಮ ಬಳಿ ಇದ್ದ ರಿವಾಲ್ವರ್ ನಿಂದ ಉದಯ್ ಕುಮಾರ್ ಮೇಲೆ ಗುಂಡು ಹಾರಿಸಿದ್ದಾರೆ.

ಉದಯ್ ಕುಮಾರ್ ಕಿವಿಗೆ ಗುಂಡು ತಗುಲಿದ್ದು, ಗುಂಡು ಹಾರಿಸಿದ ಶಶಿಕುಮಾರ್ ಅಲ್ಲಿಂದ ತಮ್ಮ ಕಾರಿನಲ್ಲಿ ಪರಾರಿಯಾಗಿದ್ದಾರೆ. ಸೀದಾ ತಮ್ಮ ಸ್ನೇಹಿತರ ಫಾರ್ಮ್ ಹೌಸ್ ಗೆ ತೆರಳಿದ ಶಶಿಕುಮಾರ್ ಅಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಶಶಿಕುಮಾರ್ ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿರುವ ಉದಯ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...