alex Certify
ಕನ್ನಡ ದುನಿಯಾ       Mobile App
       

Kannada Duniya

Frooti ಕುಡಿದು ಆಸ್ಪತ್ರೆ ಸೇರಿದ ಮೂರು ಮಕ್ಕಳು

frootiತಮ್ಮ ತಂದೆ ತಂದುಕೊಟ್ಟಿದ್ದ Frooti ಕುಡಿದ ಮೂವರು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಹೈದರಾಬಾದಿನಲ್ಲಿ ನಡೆದಿದ್ದು, ಈಗ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಆಜಾಮ್ ಎಂಬವರು ತಮ್ಮ ಮಕ್ಕಳಿಗೆ Frooti ತಂದು ಕೊಟ್ಟಿದ್ದು, ಇದನ್ನು ಕುಡಿದ 4 ವರ್ಷದ ಮಹಮ್ಮದ್ ಆಜಾನ್, 3 ವರ್ಷದ ಮಹಮ್ಮದ್ ಫೈಜಾನ್ ಹಾಗೂ 1 ವರ್ಷದ ಮಹಮ್ಮದ್ ಆಹ್ರಾನ್ ವಾಂತಿ ಮಾಡಿಕೊಂಡಿದ್ದಾರಲ್ಲದೇ ಹೊಟ್ಟೆ ನೋವಿನಿಂದ ನರಳಾಡಿದ್ದಾರೆ.

ಇದರಿಂದ ಗಾಬರಿಗೊಳಗಾದ ಆಜಾಮ್, ಮೂವರೂ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೇ ತಾವು Frooti ಖರೀದಿಸಿದ್ದ ಅಂಗಡಿಯವನ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆ ಅಂಗಡಿಯಲ್ಲಿದ್ದ Frooti ಗಳನ್ನು ವಶಪಡಿಸಿಕೊಂಡು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...