alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತದ ಬಳಿಕ ಕಾರಿನಲ್ಲಿ ಬೆಂಕಿ, ಮೂವರು ಸಜೀವ ದಹನ

ಗುಜರಾತ್ ನ ಅಹಮದಾಬಾದ್ ನಲ್ಲಿ ಅಪಘಾತದ ಬಳಿಕ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಮೂವರು ಸಜೀವ ದಹನವಾಗಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.

ರಿಂಗ್ ರೋಡ್ ನಲ್ಲಿ ತೆರಳುತ್ತಿದ್ದ ವೋಕ್ಸ್ ವ್ಯಾಗನ್ ಕಾರು, ಇನ್ನೊಂದು ಕಾರಿಗೆ ಡಿಕ್ಕಿಯಾಗಿದೆ. ಕೂಡಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಮಾತ್ರದಲ್ಲಿ ಮೂವರು ಸುಟ್ಟು ಕರಕಲಾಗಿದ್ದಾರೆ.

ಇಬ್ಬರು ಕಾರಿನಿಂದ ಹೊರಕ್ಕೆ ಬರಲು ಯಶಸ್ವಿಯಾಗಿದ್ದಾರೆ, ಆದ್ರೆ ಅವರಿಗೂ ಗಂಭೀರ ಸುಟ್ಟ ಗಾಯಗಳಾಗಿವೆ. ಮೃತರನ್ನು ರಾರುಲ್ ಬರ್ದ್, ರಾಯಲ್ ಪತ್ವಾ ಹಾಗೂ ಧೈರಿ ಪಟೇಲ್ ಅಂತಾ ಗುರುತಿಸಲಾಗಿದೆ.

ಅಮಹದಾಬಾದ್ ನ ಭದಜ್ ಸರ್ಕಲ್ ಬಳಿ ಸಂಭವಿಸಿದ ಅಪಘಾತ ಇದು. ಅಪಘಾತಕ್ಕೀಡಾದ ವೋಕ್ಸ್ ವ್ಯಾಗನ್ ಕಾರಿನಲ್ಲಿ ಚಾಲಕ ಸೇರಿದಂತೆ ಐವರು ಪ್ರಯಾಣಿಸುತ್ತಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...