alex Certify
ಕನ್ನಡ ದುನಿಯಾ       Mobile App
       

Kannada Duniya

ಪೂಜೆ ಮಾಡ್ತ ಮಾಡ್ತ ಪ್ರೀತಿಗೆ ಬಿದ್ದು ಮದುವೆಯಾದ ಪೂಜಾರಿ….!

ಪೂಜಾರಿ ಮನೆಗೆ ಪೂಜೆ ಮಾಡಲು ಬರ್ತಿದ್ದ. ಪೂಜೆ ಇಬ್ಬರನ್ನು ಒಂದು ಗೂಡಿಸಿದೆ. ನವೆಂಬರ್ 17ರಂದು ಪ್ರೇಮಿಗಳು ವಿವಾಹವಾಗಿದ್ದಾರೆ. ಆದ್ರೀಗ ರಕ್ಷಣೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಘಟನೆ ನಡೆದಿರುವುದು ಗ್ವಾಲಿಯರ್ ನ ಶಿವಪುರದಲ್ಲಿ. ಇಲ್ಲಿನ ಬೃಜೇಶ್ ಶರ್ಮಾ ಜವಾಹರ್ ಕಾಲೋನಿಯ ನಿವಾಸಿಯಾಗಿದ್ದು ದಲಿತರ ಮನೆಗೆ ಆಗಾಗ ಪೂಜೆಗೆ ಹೋಗ್ತಿದ್ದ ಎನ್ನಲಾಗಿದೆ. ಅಲ್ಲಿದ್ದ ದಲಿತ ಹುಡುಗಿ ಮೇಲೆ ಪ್ರೀತಿ ಶುರುವಾಗಿದೆ. ಇಬ್ಬರೂ ಮದುವೆ ನಿರ್ಧಾರಕ್ಕೆ ಬಂದಿದ್ದಾರೆ.

ನವೆಂಬರ್ 17ರಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಆದ್ರೆ ಮದುವೆಯಾದ ನಂತ್ರ ಬೆದರಿಕೆ ಕರೆಗಳು ಬರ್ತಿದೆಯಂತೆ. ಅಂತರ್ಜಾತಿ ವಿವಾಹದಿಂದ ಬೇಸತ್ತ ಕುಟುಂಬಸ್ಥರು ಬೆದರಿಸುತ್ತಿದ್ದಾರೆ ಎನ್ನಲಾಗಿದೆ. ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಬಂದ ದಂಪತಿ ತಮ್ಮ ನೋವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಅಂತರ್ಜಾತಿ ವಿವಾಹವಾಗಿರುವುದ್ರಿಂದ ಹಣದ ನೆರವು ನೀಡಬೇಕೆಂದು ಶರ್ಮಾ ಮನವಿ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...