alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲು ಕುಡಿದು ಹೊಸ ವರ್ಷ ಸ್ವಾಗತಿಸಿದ ಜೈಪುರ ನಿವಾಸಿಗಳು

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮದ್ಯದ ಹೊಳೆಯೇ ಹರಿಯುತ್ತದೆ. ಅಂದು ಬಾರ್ ಅಂಡ್ ರೆಸ್ಟೋರೆಂಟ್ ಗಳು ತುಂಬಿ ತುಳುಕುತ್ತಿರುತ್ತವಲ್ಲದೇ ಮದ್ಯದ ಅಮಲಿನಲ್ಲಿ ಆನೇಕ ಅಹಿತಕರ ಘಟನೆಗಳು ನಡೆಯುತ್ತವೆ.

ಹೊಸ ವರ್ಷಾಚರಣೆಯಂದು ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿರುತ್ತದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆ ವೇಳೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗಳು ಜರುಗಿದ್ದವು. ಈ ಹಿನ್ನಲೆಯಲ್ಲಿ ಈ ಬಾರಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದರೂ ಕೆಲವೊಂದು ಅಹಿತಕರ ಘಟನೆಗಳು ನಡೆದಿರುವುದರ ಕುರಿತು ವರದಿಯಾಗಿದೆ.

ಈ ಮಧ್ಯೆ ರಾಜಸ್ಥಾನದ ಜೈಪುರ್ ನಲ್ಲಿ ವಿಭಿನ್ನವಾಗಿ ಹೊಸ ವರ್ಷಾಚರಣೆಯನ್ನು ಸ್ವಾಗತಿಸಲಾಗಿದೆ. ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಅಂದು ಉಚಿತ ಹಾಲು ಸರಬರಾಜು ಮಾಡಿದ್ದು, ಸಹಸ್ರಾರು ಮಂದಿ ಬಿಸಿ ಬಿಸಿ ಹಾಲು ಕುಡಿಯುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...