alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಳದಲ್ಲಿದ್ದ ಸಹಸ್ರಾರು ಮೀನುಗಳ ಮಾರಣಹೋಮ

Thousands of fish die in temple tank in Maduraiದೇವಾಲಯಕ್ಕೆ ಸೇರಿದ ಕೊಳದಲ್ಲಿದ್ದ ಸಹಸ್ರಾರು ಮೀನುಗಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮಧುರೈಯ ತಿರುಪ್ಪಕುಂದ್ರಮ್ ನಲ್ಲಿ ನಡೆದಿದ್ದು, ದುಷ್ಕರ್ಮಿಗಳು ಕೊಳಕ್ಕೆ ವಿಷ ಬೆರೆಸಿರುವುದೇ ಮೀನುಗಳ ಮಾರಣಹೋಮಕ್ಕೆ ಕಾರಣವೆಂದು ಸ್ಥಳೀಯರು ಶಂಕಿಸಿದ್ದಾರೆ.

ತಿರುಪ್ಪಕುಂದ್ರಮ್ ನಲ್ಲಿರುವ ಶ್ರೀ ಸುಬ್ರಮಣ್ಯಸ್ವಾಮಿ ದೇವಾಲಯಕ್ಕೆ ಸೇರಿದ ಕೊಳದಲ್ಲಿ ಈ ಘಟನೆ ನಡೆದಿದ್ದು, ಭಾನುವಾರದಂದು ಸಹಸ್ರಾರು ಮೀನುಗಳು ಸಾವನ್ನಪ್ಪಿ ನೀರಿನ ಮೇಲೆ ತೇಲುತ್ತಿರುವುದು ಕಂಡು ಬಂದಿತ್ತು.

ಕೂಡಲೇ ದೇವಾಲಯದ ಆಡಳಿತ ಮಂಡಳಿ ಕೊಳವನ್ನು ಸ್ವಚ್ಚಗೊಳಿಸುವ ಕಾರ್ಯ ಮಾಡಿದ್ದು, ಕೊಳದಲ್ಲಿನ ನೀರನ್ನು ಸದ್ಯಕ್ಕೆ ಬಳಸದಂತೆ ಹಾಗೂ ಭಕ್ತಾದಿಗಳು ಸ್ನಾನಕ್ಕೆ ಇಳಿಯದಂತೆ ಸೂಚಿಸಿದೆ. ಮೀನುಗಳ ಮಾರಣಹೋಮದ ಕುರಿತಂತೆ ತನಿಖೆ ನಡೆಸಲು ಸ್ಥಳೀಯರು ಆಗ್ರಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...