alex Certify
ಕನ್ನಡ ದುನಿಯಾ       Mobile App
       

Kannada Duniya

ಬಾವಿಯಲ್ಲಿ ಸಿಕ್ತು ಸಾವಿರಾರು ಆಧಾರ್ ಕಾರ್ಡ್

ಮಹಾರಾಷ್ಟ್ರದ ಯವತ್ಮಾಲ್ ನಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ಬಾವಿಯೊಂದರಲ್ಲಿ ಸಾವಿರಾರು ವರ್ಜಿನಲ್ ಆಧಾರ್ ಕಾರ್ಡ್ ಸಿಕ್ಕಿದೆ. ನೈಲಾನ್ ಗೋಣಿ ಚೀಲದಲ್ಲಿ ಆಧಾರ್ ಕಾರ್ಡ್ ಪ್ಯಾಕ್ ಮಾಡಿ ಬಾವಿಯೊಳಗೆ ಇಳಿಸಲಾಗಿತ್ತು ಎನ್ನಲಾಗಿದೆ.

ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಗ್ರಾಮದ ಸ್ಥಳೀಯ ಯುವಕರು ಬಾವಿ ಶುದ್ಧಗೊಳಿಸಲು ಮುಂದಾಗಿದ್ದಾರೆ. ಬೇಸಿಗೆ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಾವಿಯಲ್ಲಿದ್ದ ಮಣ್ಣುನ್ನು ತೆಗೆಯಲು ಇಳಿದಿದ್ದಾರೆ. ಈ ವೇಳೆ ಅವ್ರ ಕೈಗೆ ನೈಲಾನ್ ಚೀಲ ಸಿಕ್ಕಿದೆ. ಅದ್ರಲ್ಲಿದ್ದ ವರ್ಜಿನಲ್ ಆಧಾರ್ ಕಾರ್ಟ್ ನೋಡಿ ಯುವಕರು ದಂಗಾಗಿದ್ದಾರೆ.

ಆಧಾರ್ ಕಾರ್ಡ್ ಹಾಳಾಗಿದ್ದು, ಕೆಲ ಮಾಹಿತಿಗಳನ್ನು ಮಾತ್ರ ಓದಬಹುದಾಗಿದೆ. ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ತನಿಖೆ ನಂತ್ರ ಸತ್ಯ ಹೊರಬೀಳಬೇಕಿದೆ. ತನಿಖೆ ನಂತ್ರ ಸೂಕ್ತ ಕ್ರಮಕೈಗೊಳ್ಳುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...