alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯ ಜೈಲ್-ಬೇಲ್ ಬಗ್ಗೆ ಮೋದಿ ಪ್ರತಿಕ್ರಿಯೆ

download-1

ಒಂಭತ್ತು ಸಾವಿರ ಕೋಟಿ ರೂಪಾಯಿ ಸಾಲ ತೀರಿಸದೆ ಭಾರತ ಬಿಟ್ಟು ಓಡಿ ಹೋಗಿರುವ ಮದ್ಯದ ದೊರೆ ಮಲ್ಯಗೆ ಮಂಗಳವಾರದ ಮೂರು ಗಂಟೆ ಅಮಂಗಳವಾಗಿತ್ತು. ಮಲ್ಯರನ್ನು ಲಂಡನ್ ನ ಸ್ಕಾಟ್ಲ್ಯಾಂಡ್ ಯಾರ್ಡ್ನಲ್ಲಿ ಪೊಲೀಸರು ಬಂಧಿಸಿದ್ದರು. ಆದ್ರೆ ಬಂಧನವಾಗಿ ಮೂರೇ ಗಂಟೆಯಲ್ಲಿ ಮಲ್ಯ ಜಾಮೀನು ಪಡೆಯಲು ಯಶಸ್ವಿಯಾದ್ರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟರ್ ನಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಭಾರತದ ಬಡ ಹಾಗೂ ಮಧ್ಯಮ ವರ್ಗದ ಜನರ ಹಣವನ್ನು ಲೂಟಿ ಮಾಡಿದವರು ಆ ಹಣವನ್ನು ವಾಪಸ್ ಮಾಡಲೇಬೇಕೆಂದು ಮೋದಿ ಹೇಳಿದ್ದಾರೆ. ನಿಸ್ಸಂದೇಹವಾಗಿ ಭಾರತದಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಜಾಗವಿಲ್ಲ. ಯಾರು ಮಧ್ಯಮ ವರ್ಗದವರು ಹಾಗೂ ಬಡವರ ಹಣವನ್ನು ಲೂಟಿ ಮಾಡಿದ್ದಾರೋ ಅವರು ಹಣವನ್ನು ವಾಪಸ್ ಮಾಡಲೇಬೇಕೆಂದು ಮೋದಿ ಟ್ವಿಟ್ ಮಾಡಿದ್ದಾರೆ.

ಮೋದಿ ಫಾಲೋವರ್ಸ್ ಒಬ್ಬರು ಭ್ರಷ್ಟಾಚಾರ ದುಡಿಮೆಯ ಹಣ ಹಾಗೂ ಆತ್ಮಸನ್ಮಾನವನ್ನು ಹಾಳು ಮಾಡಿದೆ ಎಂದು ಟ್ವಿಟ್ ಮಾಡಿದ್ದರು. ಇದಕ್ಕೆ ಮೋದಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಮಲ್ಯ ಲಂಡನ್ ಗೆ ಹೋಗ್ತಾ ಇದ್ದಂತೆ ಭಾರತ ಸರ್ಕಾರ ಲಂಡನ್ ಸರ್ಕಾರವನ್ನು ಸಂಪರ್ಕಿಸಿ ಮಲ್ಯರನ್ನು ಹಸ್ತಾಂತರಿಸುವಂತೆ ಕೋರಿತ್ತು. ಇದ್ರ ವಿಚಾರಣೆ ನಡೆದು ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮಲ್ಯ ಬಂಧನಕ್ಕೆ ಆದೇಶ ನೀಡಿತ್ತು. ನಂತ್ರ ಮಲ್ಯ ಬಂಧಿಸಿದ್ದ ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಆ ನಂತ್ರ ಮಲ್ಯಗೆ ಜಾಮೀನು ಸಿಕ್ಕಿದ್ದು, ವಿಚಾರಣೆ ಮೇ17 ರಂದು ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...