alex Certify
ಕನ್ನಡ ದುನಿಯಾ       Mobile App
       

Kannada Duniya

ಆಂಬ್ಯುಲೆನ್ಸ್ ನಲ್ಲಿ ಮೂತ್ರ ಮಾಡಿದ್ದಕ್ಕೆ ರೋಗಿಯ ಪ್ರಾಣಕ್ಕೇ ಕುತ್ತು ತಂದ ಚಾಲಕ

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಆಂಬ್ಯುಲೆನ್ಸ್ ಚಾಲಕನ ದುಷ್ಕೃತ್ಯದಿಂದ ಜೀವ ಕಳೆದುಕೊಂಡಿದ್ದಾನೆ. ಕೇರಳದ ಪಲಕ್ಕಾಡ್ ನಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಆತ ಗಾಯಗೊಂಡಿದ್ದ. ಪಲಕ್ಕಾಡ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ತ್ರಿಶೂರ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.

ಆತನ ಜೊತೆಗೆ ಕುಟುಂಬ ಸದಸ್ಯರು ಇರಲಿಲ್ಲ. ಗಾಯಾಳು ಆಂಬ್ಯುಲೆನ್ಸ್ ನಲ್ಲಿ ಮೂತ್ರ ಮಾಡಿದ್ದಕ್ಕೆ ರೊಚ್ಚಿಗೆದ್ದ ಚಾಲಕ ಅವನನ್ನು ಸ್ಟ್ರೆಚರ್ ನಲ್ಲಿ ತಲೆಕೆಳಗು ಮಾಡಿ ನೇತು ಹಾಕಿದ್ದಾನೆ. ಜೊತೆಗಿದ್ದ ಆಸ್ಪತ್ರೆಯ ಸಿಬ್ಬಂದಿ ಕೌಂಟರ್ ಗೆ ತೆರಳಿ ಎಮರ್ಜೆನ್ಸಿ ಬಗ್ಗೆ ಮಾಹಿತಿ ನೀಡುತ್ತಿದ್ರು.

ಆ ಸಮಯದಲ್ಲಿ ಚಾಲಕ ಗಾಯಾಳು ಇದ್ದ ಸ್ಟ್ರೆಚರ್ ಅನ್ನು ಜೋರಾಗಿ ಹೊರಕ್ಕೆಳೆದಿದ್ದಾನೆ. ಆ ರಭಸಕ್ಕೆ ಗಾಯಾಳು ಕೆಳಕ್ಕೆ ಬಿದ್ದಿದ್ದ. ಬಳಿಕ ಆಸ್ಪತ್ರೆ ಸಿಬ್ಬಂದಿ ಅವನನ್ನು ಮೇಲಕ್ಕೆತ್ತಿ ವ್ಹೀಲ್ ಚೇರ್ ನಲ್ಲಿ ಕೂರಿಸಿ ಕರೆದೊಯ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...