alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವರ್ಷ ಮೆಟ್ರೋದಲ್ಲಿ ಕಳ್ಳಿಯರದ್ದೇ ದರ್ಬಾರ್!

metro

ದೆಹಲಿ ಮೆಟ್ರೋದಲ್ಲಿ ನಿಮ್ಮ ಸುತ್ತಲೂ ಮಹಿಳಾ ಪ್ರಯಾಣಿಕರೇ ಸುತ್ತುವರಿದಿದ್ರೆ ಕೊಂಚ ಜಾಗರೂಕರಾಗಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಮುನ್ನವೇ ಎಚ್ಚೆತ್ತುಕೊಳ್ಳಿ.

ಯಾಕಂದ್ರೆ ದೆಹಲಿ ಮೆಟ್ರೋದಲ್ಲಿ ಕಳ್ಳಿಯರ ಸಂಖ್ಯೆ ಹೆಚ್ಚಾಗಿದೆ. 10-12 ಗ್ಯಾಂಗ್ ಗಳು ಮೆಟ್ರೋ ಪ್ರಯಾಣಿಕರನ್ನು ಲೂಟಿ ಮಾಡ್ತಿವೆ. ಈ ವರ್ಷ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ 532 ಕಳ್ಳಿಯರನ್ನು ಸೆರೆಹಿಡಿದಿದೆ.

ಪ್ರತಿದಿನ ಕನಿಷ್ಟ ಇಬ್ಬರು ಕಳ್ಳಿಯರು ಸಿಕ್ಕಿಬೀಳ್ತಿದ್ದಾರೆ. ಈ ವರ್ಷ ಸಿಕ್ಕಿಬಿದ್ದಿರೋ ಕಳ್ಳಿಯರ ಸಂಖ್ಯೆ, ಕಳ್ಳರಿಗಿಂತ 4 ಪಟ್ಟು ಹೆಚ್ಚಾಗಿದೆ. ಈ ವರ್ಷ 246 ಪ್ರಕರಣಗಳು ದಾಖಲಾಗಿದ್ದು, ಎಲ್ಲವನ್ನೂ ಪತ್ತೆ ಮಾಡಲು ಪೊಲೀಸರಿಂದ ಸಾಧ್ಯವಾಗಿಲ್ಲ.

ರಷ್ ಇರುವ ಬೋಗಿಗಳಲ್ಲಿ ಹತ್ತಿಕೊಂಡು ಮಹಿಳೆಯರು ಪಿಕ್ ಪಾಕೆಟ್ ಮಾಡುವ ದಂಧೆ ಶುರು ಮಾಡಿದ್ದಾರೆ. ಕಳ್ಳಿಯರು ಯಾರಾದ್ರೂ ಒಬ್ಬರ ಮೇಲೆ ಮೊದಲೇ ಗಮವಿಟ್ಟುಕೊಂಡು ಅವರ ಜೊತೆಗೇನೆ ಬೋಗಿಯಲ್ಲಿ ಹತ್ತಿಕೊಳ್ತಾರೆ. ಅವರಲ್ಲಿ ಒಬ್ಬರು ಅನಾರೋಗ್ಯಕ್ಕೆ ತುತ್ತಾದಂತೆ ನಾಟಕ ಮಾಡ್ತಾರೆ, ಆ ಸಮಯದಲ್ಲಿ ಉಳಿದವರು ಪ್ರಯಾಣಿಕರ ಬಳಿಯಿದ್ದ ಅಮೂಲ್ಯ ವಸ್ತುಗಳನ್ನು ಎಗರಿಸ್ತಾರೆ. ವಿಚಾರಣೆ ನೆಪದಲ್ಲಿ ಠಾಣೆಗೆ ಅಲೆಯಬೇಕಾಗುತ್ತದೆ ಎಂಬ ಭಯದಲ್ಲಿ ಪ್ರಯಾಣಿಕರು ಕಳ್ಳತನದ ಬಗ್ಗೆ ದೂರು ದಾಖಲಿಸುತ್ತಿಲ್ಲ. ಇಂದ್ರಲೋಕ್, ಶಾದಿಪುರ್, ಆರ್ ಕೆ ಆಶ್ರಮ್, ಶಾಸ್ತ್ರಿ ನಗರ ಹಾಗೂ ಸೀಲಂಪುರ ಸ್ಟೇಶನ್ ಗಳಲ್ಲಿ ಕಳ್ಳಿಯರ ಸಂಖ್ಯೆ ಹೆಚ್ಚಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...