alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಹಳ್ಳಿಯಲ್ಲಿ ಪೇಪರ್ ಚೀಟಿಯೇ ಕರೆನ್ಸಿ ನೋಟ್

mizoram-is-using

500 ರೂ. ಹಾಗೂ 1000 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ, ದೇಶದಲ್ಲಿ ಜನಸಾಮಾನ್ಯರು ತತ್ತರಿಸಿದ್ದಾರೆ. ಹೊಸ 2000 ರೂಪಾಯಿ ನೋಟಿಗೆ ಚಿಲ್ಲರೆ ಇಲ್ಲದೇ ಪರದಾಡುತ್ತಿದ್ದು, ಕೈಯಲ್ಲಿರುವ ಹಳೆ ನೋಟುಗಳಿಗೆ ಬೆಲೆ ಇಲ್ಲವಾಗಿದೆ.

ಇಂತಹ ಸಂದರ್ಭದಲ್ಲಿ ಮಿಜೋರಾಂ ರಾಜ್ಯದ ಖಾವ್ ಬಾಂಗ್ ಗ್ರಾಮದ ಜನ ಪೇಪರ್ ಚೀಟಿಯನ್ನೇ ಕರೆನ್ಸಿ ನೋಟುಗಳಾಗಿ ಬಳಸುವ ಮೂಲಕ, ನೋಟ್ ಎಫೆಕ್ಟ್ ಆಗದಂತೆ ನೋಡಿಕೊಂಡಿದ್ದಾರೆ. ನೋಟ್ ಬ್ಯಾನ್ ನಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಜನ ಹೈರಾಣಾಗಿದ್ದಾರೆ. ಆದರೆ, ಭಾರತ-ಮಯನ್ಮಾರ್ ಗಡಿಯಲ್ಲಿರುವ ಖಾವ್ ಬಾಂಗ್ ಗ್ರಾಮದ ಜನ ಮಾತ್ರ ಹೊಸ ವಿಧಾನ ಕಂಡುಕೊಂಡಿದ್ದಾರೆ.

ಹೋಟೆಲ್, ಅಂಗಡಿ, ಸಣ್ಣ ಪುಟ್ಟ ವ್ಯಾಪಾರಸ್ಥರು ಕಾಗದದ ಚೀಟಿಯನ್ನೇ ಹಣದ ರೂಪದಲ್ಲಿ ಬಳಸುತ್ತಿದ್ದಾರೆ. ಗ್ರಾಹಕರಿಗೂ ಇದರಿಂದ ಅನುಕೂಲವಾಗಿದೆ. ಹಣ ಕೊಡುವವರ ಸಹಿ ಮತ್ತು ಮೊತ್ತವನ್ನು ಚೀಟಿಯಲ್ಲಿ ಬರೆದುಕೊಡಲಾಗುತ್ತಿದೆ. ನಂತರ ಚೀಟಿಯಲ್ಲಿರುವ ಮೊತ್ತದಷ್ಟು ಹಣ ಕೊಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾಗದದ ಚೀಟಿಯೇ ಬಳಕೆಯಾಗುತ್ತಿದ್ದು, ಗ್ರಾಮಸ್ಥರಿಗೆ ಅನುಕೂಲವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...