alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಾತಂತ್ರ್ಯ ಬಂದು 71 ವರ್ಷಗಳಾದ್ರೂ ಈ ಗ್ರಾಮಕ್ಕಿರಲಿಲ್ಲ ವಿದ್ಯುತ್ ಸಂಪರ್ಕ

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಛತ್ತೀಸ್ಗಢದ ಈ ಗ್ರಾಮ ಮಾತ್ರ ಅಂಧಕಾರದಲ್ಲಿತ್ತು. ಭಾರತ ಸ್ವತಂತ್ರವಾಗಿ 71 ವರ್ಷಗಳ ಬಳಿಕ ಬಲ್ರಾಂಪುರ ಜಿಲ್ಲೆಯ ಜೋಕಾಪಥ್ ಗ್ರಾಮಕ್ಕೆ ಬೆಳಕು ಬಂದಿದೆ. ಇದೇ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ.

ಇಷ್ಟು ವರ್ಷ ಕತ್ತಲ ಕೂಪದಲ್ಲಿದ್ದ ಗ್ರಾಮಸ್ಥರು ಈಗ ಫುಲ್ ಖುಷಿಯಾಗಿದ್ದಾರೆ. ಇನ್ನಾದ್ರೂ ಮಕ್ಕಳಿಗೆ ಚೆನ್ನಾಗಿ ಓದಲು ಅನುಕೂಲವಾಗಬಹುದು ಅನ್ನೋದು ಅವರ ನಿರೀಕ್ಷೆ. ಗಿರಿ ಶಿಖರಗಳ ಮಧ್ಯೆ ಇರುವ ಕುಗ್ರಾಮ ಇದು. ಇಲ್ಲಿ ಮೂಲ ಸೌಕರ್ಯಗಳೆಲ್ಲಾ ಮರೀಚಿಕೆಯಾಗಿವೆ.

ಸರಿಯಾದ ರಸ್ತೆ, ಶಾಲೆಗಳು, ಆಸ್ಪತ್ರೆ, ಕುಡಿಯೋ ನೀರು, ವಿದ್ಯುತ್ ಸಂಪರ್ಕ ಯಾವುದೂ ಇರಲಿಲ್ಲ. 7 ದಶಕಗಳ ನಂತರ ಗ್ರಾಮದಲ್ಲಿ ಬೆಳಕು ಮೂಡಿದೆ. ಗ್ರಾಮದ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...