alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿಬೀಳಿಸುತ್ತೆ ಏರ್ ಪೋರ್ಟ್ ಕ್ಯಾಂಟೀನ್ ನಲ್ಲಿ ಕಂಡು ಬಂದ ದೃಶ್ಯ

ಬೀದಿ ಪಕ್ಕದಲ್ಲಿ ಮಾರಾಟ ಮಾಡುವ ತಿಂಡಿ ಸ್ವಚ್ಛವಾಗಿರುತ್ತವೆ ಅಂತಾ ನಿರೀಕ್ಷಿಸೋದೇ ತಪ್ಪು. ಆದರೆ ಲಕ್ಸುರಿ ರೆಸ್ಟೋರೆಂಟ್ ಗಳಲ್ಲಿ, ಫೈವ್ ಸ್ಟಾರ್ ಹೋಟೆಲ್ ನಲ್ಲಿ, ಏರ್ ಪೋರ್ಟ್ ನಲ್ಲಿ ಹೀಗಾದರೆ…? ಹೌದು….ಏರ್ ಫೋರ್ಟ್ ನಲ್ಲಿ ಇಲಿಗಳು ಹರಿದಾಡಿದ ಆಹಾರವನ್ನು ನೀಡಲಾಗುತ್ತಿತ್ತು ಅನ್ನೋದು ಈಗ ಬಹಿರಂಗಗೊಂಡಿದೆ.

ಹೈದ್ರಾಬಾದ್ ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಕ್ಯಾಂಟೀನ್ ನಲ್ಲಿ ಇಲಿಗಳು ಹರಿದಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಗ್ರಾಹಕರಿಗೆಂದು ತಯಾರಿಸಲಾಗಿದ್ದ ಆಹಾರದ ಮೇಲೆಲ್ಲಾ ಇಲಿಗಳು ಹರಿದಾಡುತ್ತಿರುವ ಹಾಗೂ ಅದನ್ನು ತಿನ್ನುತ್ತಿರುವ ವಿಡಿಯೋ ಬಹಿರಂಗವಾಗಿದ್ದು ತೀವ್ರ ಆಕ್ಷೇಪ ಎದುರಾಗಿದೆ.

ತಕ್ಷಣವೇ ಎಚ್ಚೆತ್ತುಕೊಂಡ ಏರ್ ಪೋರ್ಟ್ ಅಧಿಕಾರಿಗಳು ಈ ಕುರಿತು ವಿಚಾರಣೆಗೆ ಸೂಚಿಸಿದ್ದು, ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೇ ಇಂಥ ತಪ್ಪು ಇನ್ನು ಮುಂದೆ ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...