alex Certify
ಕನ್ನಡ ದುನಿಯಾ       Mobile App
       

Kannada Duniya

ತರಗತಿಯಲ್ಲೇ ನಿದ್ದೆ ಹೊಡೆದ ಪುಟ್ಟ ಬಾಲೆಯ ವಿಡಿಯೋ ವೈರಲ್

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ….ನನ್ನ ತಮ್ಮಾ.. ಮಂಕುತಿಮ್ಮ…ಕ್ಲಾಸ್‌ರೂಂನೊಳಗೆ ಈ ಪುಟಾಣಿಯ ಭರ್ಜರಿ ನಿದ್ದೆಯನ್ನು ಕಂಡಾಗ ಮೇಲಿನ ಹಳೆ ಕನ್ನಡ ಚಿತ್ರಗೀತೆ ನೆನಪಿಗೆ ಬರುತ್ತದೆ.

ಸವಿನಿದ್ದೆಯ ಹೊತ್ತಲ್ಲಿ ಎಬ್ಬಿಸಿ ಎಳೆಮಕ್ಕಳನ್ನು ಶಾಲೆಗೆ ಎಳೆದೊಯ್ದು ಕುಳ್ಳಿರಿಸಿದರೆ ಇನ್ನೇನಾಗುತ್ತದೆ ಪಾಪ! ಇವಳ ಕಥೆಯೂ ಇದೇ ಆಗಿರಬಹುದೇನೋ. ಸದ್ಯಕ್ಕಂತೂ ಸಾಮಾಜಿಕ ಜಾಲತಾಣದಲ್ಲಿ ಈ ಪುಟಾಣಿಯ ನಿದ್ದೆ ಭಾರೀ ಸದ್ದು ಮಾಡುತ್ತಿರುವುದಂತೂ ಹೌದು.

ಇತರೆ ಎಲ್ಲಾ ಮಕ್ಕಳು ಪಾಠ ಕೇಳುತ್ತಿದ್ದರೆ, ಮಾನ್ಸಿ ಎಂಬ ಹೆಸರಿನ ಈ ಹುಡುಗಿ ಮಾತ್ರ ನಿದ್ರೆ ಮಾಡುತ್ತಿದ್ದಾಳೆ. ಟೀಚರ್ ಹಾಗೂ ಪಕ್ಕದಲ್ಲಿ ಕುಳಿತ ಸಹಪಾಠಿ ಎಷ್ಟು ಎಬ್ಬಿಸಿದರೂ ಇವಳಿಗೆ ನಿದ್ರೆ ಬಿಡುತ್ತಿಲ್ಲ ಪಾಪ. ಬೆಂಚಿಗೆ ತಲೆಯೊರಗಿಸಿ ನಿದ್ರಿಸುತ್ತಾಳೆ.

ಎಬ್ಬಿಸಿದಾಗ ನೇರವಾಗಿ ಕುಳಿತು ಮತ್ತೆ ನಿದ್ರಾದೇವಿಯ ವಶವಾಗುತ್ತಾಳೆ. ಮತ್ತೆ ತಟ್ಟಿ ಎಬ್ಬಿಸಿದಾಗ ಒಮ್ಮೆ ಕಣ್ಣು ತೆರೆದು ಅರೆಕ್ಷಣದಲ್ಲಿ ಕಣ್ಣುಮುಚ್ಚಿ ತಲೆಯನ್ನು ಬೆಂಚಿಗೊರಗಿಸಿ ಮಲಗುತ್ತಾಳೆ. ಹೀಗೆ ಮೂರು ಬಾರಿ ನಿದ್ರೆಯಲ್ಲೇ ತನ್ನ ಸ್ಥಿತಿ ಬದಲಾಯಿಸುತ್ತಾಳೆ. ಇದೆಲ್ಲವನ್ನೂ ಟೀಚರ್ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಈ ಪುಟಾಣಿಯೇನು ಮಹಾ, ಕಾಲೇಜುಗಳಲ್ಲಿ ಲೆಕ್ಚರರ್‌ಗಳ ಬೋರು ಹೊಡೆಸುವ ಲೆಕ್ಚರ್‌ ಕೇಳುತ್ತಾ ತೂಕಡಿಸೋದಿಲ್ವೇ, ಅಷ್ಟೇಕೆ, ಕಚೇರಿಗಳಲ್ಲಿನ ಬೋರಿಂಗ್ ಮೀಟಿಂಗ್‌ಗಳ ಮಧ್ಯೆ ನಿದ್ರೆಗೆ ಜಾರುವ ವಯಸ್ಕರೂ ಇಲ್ವೇ?

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...