alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿಯಾದ್ರೂ ಇದು ನಿಜ ! ವರ್ಷಕ್ಕೆ ಕೇವಲ 12 ಗಂಟೆ ಮಾತ್ರ ತೆರೆದಿರುತ್ತೆ ಈ ದೇವಾಲಯ

ದೇಶದಲ್ಲಿರುವ ಒಂದೊಂದು ದೇವಾಲಯಗಳದ್ದು ಒಂದೊಂದು ಆಚರಣೆ‌. ಕೆಲ ದೇವಾಲಯಗಳು ವರ್ಷವಿಡೀ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿದ್ದರೆ, ಇಲ್ಲಿರುವ ಒಂದು ದೇವಾಲಯ ವರ್ಷಕ್ಕೆ ಕೇವಲ 12 ಗಂಟೆ ಮಾತ್ರ ತೆರೆಯಲಿದೆ.

ಹೌದು, ಛತ್ತೀಸ್ ಘಡದ ಕೊಂಡ್ಗಾನ್ ಜಿಲ್ಲೆಯಲ್ಲಿರುವ ಮಠ ಲಿಂಗೇಶ್ವರ ದೇವಾಲಯ ವರ್ಷಕ್ಕೆ ಕೇವಲ 12 ಗಂಟೆ ಮಾತ್ರ ತೆರೆದಿರಲಿದ್ದು, ಈ ವೇಳೆಗೆ ಕಾದು ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ.

ದೇವಾಲಯ ಇರುವ ಭಾಗದಲ್ಲಿ ನಕ್ಸಲರ ಹಾವಳಿ ಹೆಚ್ಚಿರುವುದರಿಂದ, ವಿಶೇಷ ದಿನದಂದು ಭಾರಿ ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ. ದೊಡ್ಡ ಕಲ್ಲಿನ ತುದಿಯಲ್ಲಿರುವ ಈ ದೇವಾಲಯ ತಲುಪಲು ತೆವಳಿಕೊಂಡು ಹೋಗಬೇಕು.

ದೇವಾಲಯದ ಬಗ್ಗೆ ಮಾತನಾಡಿರುವ ಇಂದೋರ್ ನಿವಾಸಿ ಅಭಿಜಿತ್ ಮೆಹ್ತಾ ಎನ್ನುವವರು, ದೇವಾಲಯದ ಬಗ್ಗೆ ಅನೇಕರು ತಿಳಿಸಿದ್ದರು. ಆದ್ದರಿಂದ ಮಗು ಅಗಲಿ ಎಂಬ ಹರಕೆ ಹೊತ್ತು ನಾನು ಬಂದಿದ್ದೇನೆ ಎನ್ನುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...